ಗಾಂಜಾ ಸೇವನೆ: ಓರ್ವ ವಶಕ್ಕೆ
ಕಾಪು, ಡಿ.29: ಗಾಂಜಾ ಸೇವನೆಗೆ ಸಂಬಂಧಿಸಿ ಓರ್ವನನ್ನು ಕಾಪು ಪೊಲೀಸರು ಕಾಪು ಲೈಟ್ ಹೌಸ್ ಸಮೀಪ ಡಿ.21ರಂದು ವಶಕ್ಕೆ ಪಡೆದು ಕೊಂಡಿದ್ದಾರೆ.
ಮಂಗಳೂರು ಕೂಳೂರು ಬೇಂಗ್ರೆ ನಿವಾಸಿ ಸೈಯದ್(23) ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು, ಮಣಿಪಾಲ ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರುಪಡಿಸಿದ್ದು, ಪರೀಕ್ಷೆಯಲ್ಲಿ ಆತ ಗಾಂಜಾ ಸೇವಿಸಿರುವುದು ಡಿ.28 ರಂದು ದೃಢಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





