ಬಾಲಪರಾಧಿ ಪ್ರಕರಣ ; ಕಾನೂನಿನ ಸಂಘರ್ಷಕ್ಕೊಳಪಟ್ಟ ಮಕ್ಕಳು ಎಂದು ಸಂಬೋಧಿಸಲು ಸೂಚನೆ
ಮಂಗಳೂರು, ಡಿ. 29: ಮಕ್ಕಳ ರಕ್ಷಣಾ ನಿರ್ದೇಶನಾಲಯವು ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, 2015ನ್ನು ಅನುಷ್ಠಾನ ಗೊಳಿಸುತ್ತಿದ್ದು, ಈ ಕಾಯ್ದೆಯ ಅನುಸಾರ ಕಾನೂನಿನ ಸಂಘರ್ಷಕ್ಕೆ ಒಳಪಟ್ಟಿರುವ ಮಕ್ಕಳನ್ನು ಬಾಲಪರಾಧಿಗಳು ಎಂದು ಸಂಬೋಧಿಸುವ ಬದಲು ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳು ಅಂತ ಹೇಳಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ತಿಳಿಸಿದ್ದಾರೆ.
ಅಂತೆಯೇ ಸುಧಾರಣಾ ಸಂಸ್ಥೆಗಳು ಅಥವಾ ಕರೆಕ್ಷನಲ್ ಹೋಮ್ಸ್ ಎಂದು ಸಂಬೋಧಿಸುವ ಬದಲು ಮಕ್ಕಳ ಪಾಲನಾ ಸಂಸ್ಥೆಗಳು ಎಂದೂ ಸಂಬೋಧಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





