ಎಸ್‌ವೈಎಸ್ ಹಿದಾಯತ್ ನಗರ ಶಾಖೆ ಕೌಂಟ್ 20 ವಾರ್ಷಿಕ ಮಹಾಸಭೆ

ಕೋಟೆಕಾರ್, ಡಿ.29: ಎಸ್‌ವೈಎಸ್ ಹಿದಾಯತ್ ನಗರ ಶಾಖೆಯ ವಾರ್ಷಿಕ ಮಹಾಸಭೆಯು ಹಿದಾಯತ್ ನಗರ ಮದ್ರಸ ಹಾಲ್ನಲ್ಲಿ ಎಸ್‌ವೈಎಸ್ ಅಧ್ಯಕ್ಷ ಕಬೀರ್ ಸಅದಿ ಉಳ್ಳಾಲ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ಸಖಾಫಿ ದುಆಗೈದರು.
ಕಾರ್ಯದರ್ಶಿ ಝಕರಿಯ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಉಸ್ತುವಾರಿ ಸಿದ್ದೀಕ್ ತಲಪಾಡಿ ಮಾತನಾಡಿದರು. ವೀಕ್ಷರಾಗಿ ಸೆಂಟರ್ ಕಾರ್ಯದರ್ಶಿ ಕೆ.ಎಂ. ಫಾರೂಕ್ ಕೋಟೆಪುರ, ಮುಸ್ತಫ ಝುಹ್ರಿ ಕೊಮರಂಗಳ, ಷರೀಫ್ ಮಕ್ಯಾರ್ ತಲಪಾಡಿ ಪಾಲ್ಗೊಂಡಿದ್ದರು.
ಈ ಸಂದರ್ಭ ಮುಹದ್ಸಿನ್ ಹಸನ್ ಮದನಿ, ಉಪಾಧ್ಯಕ್ಷ ಕೆಎಂ ಅಬ್ದುಲ್ ಖಾದರ್, ರಿಯಾಝ್ (ಅಂಗಡಿ), ಸಾಂತ್ವನ ಕಾರ್ಯದರ್ಶಿ ಮುನೀರ್ ಎಸ್.ಎಚ್ ಮಸ್ಜಿದ್ ಅಧ್ಯಕ್ಷ ಮೊಯಿದೀನ್ ಕುಟ್ಟಿ, ಮಸೀದಿಯ ಕಾರ್ಯದರ್ಶಿ ಜಾಬಿರ್ ಹುಸೈನ್, ಝುಬೈರ್ ಝುಹ್ರಿ ಮತ್ತಿತರರು ಉಪಸ್ತಿತರಿದ್ದರು.
ದಅವಾ ಕಾರ್ಯದರ್ಶಿ ಶಬೀರ್ ಅಶ್‌ಹರಿ ಸ್ವಾಗತಿಸಿ, ವಂದಿಸಿದರು.
Next Story





