ಶ್ರೀಗೋಕರ್ಣನಾಥ ಕೋ-ಓಪರೇಟಿವ್ ಬ್ಯಾಂಕ್‌ನ ಮಹಾಸಭೆ
ಮಂಗಳೂರು, ಡಿ.29: ಶ್ರೀ ಗೋಕರ್ಣನಾಥ ಕೋ-ಓಪರೇಟಿವ್ ಬ್ಯಾಂಕ್ ಲಿ. ಮಂಗಳೂರು ಇದರ 96ನೇ ವಾರ್ಷಿಕ ಸಭೆಯು ಇತ್ತೀಚೆಗೆ ಬ್ಯಾಂಕ್‌ನ ಅಧ್ಯಕ್ಷ ಎಂ.ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
2019-20ನೆ ಸಾಲಿನಲ್ಲಿ ಬ್ಯಾಂಕ್ 265.78 ಲಕ್ಷ ರೂ. ನಿರ್ವಹಣಾ ಲಾಭ ಗಳಿಸಿ 128.36 ಲಕ್ಷ ರೂ. ನಿವ್ವಳ ಲಾಭ ಗಳಿಸಿರುತ್ತದೆ. 2019-20ನೇ ಸಾಲಿನಲ್ಲಿ ನಿವ್ವಳ ಅನುತ್ಪಾದಕ ಸಾಲದ ಪ್ರಮಾಣ ಶೇ.0, ಬಂಡವಾಳ ಸಾಮರ್ಥ್ಯ ಅನುಪಾತ (ಸಿಆರ್‌ಎಆರ್) ಶೇ.28.28 ಆಗಿರುತ್ತದೆ. ಬ್ಯಾಂಕ್‌ನ ಎನ್.ಪಿ.ಎ., ಸಿ.ಆರ್.ಎ.ಆರ್ ಮತ್ತು ಲಾಭ ಗಳಿಕೆ ಮಾನ ದಂಡಗಳ ಅನ್ವಯ ಭಾರತೀಯ ರಿಸರ್ವ್ ಬ್ಯಾಂಕ್‌ನ ಮೆಚ್ಚುಗೆಗೆ ಪಾತ್ರವಾಗಿರುವ ಅಂಶವನ್ನು ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಭರತ್ ಭೂಷಣ್ ಸುವರ್ಣ ಸಭೆಯ ಮುಂದಿಟ್ಟರು.
ನಿರ್ದೇಶಕರಾದ ಯೋಗೀಶ್ ಕೋಟ್ಯಾನ್, ಜಿ. ಸದಾನಂದ ಅಮೀನ್, ಕುಪ್ಪಪೂಜಾರಿ, ಅಶೋಕ್ ಸುವರ್ಣ, ಜಗದೀಶ ಎನ್., ಶೇಖರ ಬಂಗೇರ, ಜಯ ಕುಮಾರ್ ಸೊರಕೆ, ಕೆ. ಪದ್ಮನಾಭ ಕೋಟ್ಯಾನ್, ಹರೀಶ್ ಪೂಜಾರಿ ಕೆ., ಚಂದ್ರಶೇಖರ್ ಕುಮಾರ್, ನಾಗರಾಜ, ಎಂ. ಗಾಯತ್ರಿ, ಗಾಯತ್ರಿ ಗಣೇಶ್, ಚಂದ್ರಾವತಿ, ಪಿ.ವಿಶ್ವನಾಥ ನಾಯ್ಕಾ, ಬಿ.ರಮೇಶ್, ಯಶೋಧರ್ ಪಿ. ಕರ್ಕೇರಾ ಉಪಸ್ಥಿತರಿದ್ದರು.
ಬ್ಯಾಂಕ್‌ನ ಉಪಾಧ್ಯಕ್ಷ ಕೃಷ್ಣಪ್ಪಪೂಜಾರಿ ವಂದಿಸಿದರು. ಬ್ಯಾಂಕ್‌ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ರಾಜಾರಾಮ ಬಿ. ಅಂಚನ್, ಆಡಳಿತ ಕಚೇರಿಯ ಅಸಿಸ್ಟೆಂಟ್ ,ಮ್ಯಾನೇಜರ್ ಜಯಾ ಎಂ. ಕೋಟ್ಯಾನ್ ಸಹಕರಿಸಿದರು.







