ಮತ್ತೆ ಕೊರೋನ ಹಾವಳಿ: ಬೀಜಿಂಗ್‌ನ ಕೆಲವೆಡೆ ಲಾಕ್‌ಡೌನ್

ಬೀಜಿಂಗ್,ಡಿ.29: ಕೊರೋನ ವೈರಸ್‌ನ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾದ ರಾಜಧಾನಿ ಬೀಜಿಂಗ್‌ನ ಈಶಾನ್ಯ ಶುನ್ಯಿ ಜಿಲ್ಲೆಯ 10 ಪ್ರದೇಶಗಳನ್ನು ಸೀಲ್‌ಡೌನ್ ಮಾಡಿ, ಚೀನಾ ಮಂಗಳವಾರ ಆದೇಶ ಹೊರಡಿಸಿದೆ. ಕಳೆದ ವರ್ಷದ ಜೂನ್ ಹಾಗೂ ಜುಲೈ ತಿಂಗಳುಗಳಲ್ಲಿ ಕೊರೋನ ವೈರಸ್ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಅದರ ಆನಂತರ ರಾಷ್ಟ್ರ ರಾಜಧಾನಿಯಲ್ಲಿ ಹೇರಲಾದ ಪ್ರಥಮ ಲಾಕ್‌ಡೌನ್ ಇದಾಗಿದೆ.
ಡಿಸೆಂಬರ್ 18ರಿಂದೀಚೆಗ ಬೀಜಿಂಗ್‌ನಲ್ಲಿ ಒಟ್ಟು 16 ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಬಹುತೇಕ ಪ್ರಕರಣಗಳು ಶುನ್ಯಿ ಜಿಲ್ಲೆಯಿಂದಲೇ ವರದಿಯಾಗಿವೆ. ಕೊರೋನ ಸೋಂಕು ಹರಡುತ್ತಿರುವ ಕಾರಣ, ಅಲ್ಲಿನ ವಸತಿ ಪ್ರದೇಶಗಳಿಗೆ ಕೊರಿಯರ್‌ಗಳ ರವಾನೆಯನ್ನು ನಿಷೇಧಿಸಲಾಗಿದೆ.
ಆರು ಬಡಾವಣೆಗಳು ಮೂರು ಕಚ್ಟಡಗಳು ಹಗಾಗೂ ಒಂದು ಕೈಗಾರಿಕಾ ವಲಯದ ಮೇಲೆ ಲಾಕ್‌ಡೌನ್ ಹೇರಲಾಗಿದೆ. ಸೋಂಕು ಕಾಣಿಸಿಕಂಡ ಪ್ರದೇಶಗಳಲ್ಲಿ ಕೊರೋನ ವೈರಸ್ ನಿಯಂತ್ರಣಕ್ಕಾಗಿ ಕ್ರಮಗಳನ್ನು ಕೈಗೊಳ್ಳುವಂತೆ ನಗರಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಧಾರ್ಮಿಕ ಮಂದಿರಗಳಲ್ಲಿನ ಉತ್ಸವಗಳು ಹಾಗೂ ಕ್ರೀಡಾ ಕಾರ್ಯಕ್ರಮಗಳಂತಹ ಬೃಹತ್ ಸಭೆಗಳನ್ನು ರದ್ದುಪಡಿಸಲು ಅಥವಾ ವಾರ್ಷಿಕ ಸಂತೋಷಕೂಟಗಳಂತಹ ಸಮಾರಂಭಗಳಲ್ಲಿ ಜನರ ಉಪಸ್ಥಿತಿಯನ್ನು ಕಡಿಮೆಗೊಳಿಸಿ ಆದೇಶ ಹೊರಡಿಸುವುದಾಗಿ ಬೀಜಿಂಗ್‌ನ ಸ್ಥಳೀಯಾಡಳಿತ ತಿಳಿಸಿದೆ.







