ಎಂಆರ್ಪಿಎಲ್ಗೆ ಭಾರತದ ಅತ್ಯುತ್ತಮ ಪಿಎಸ್ಯು ಪ್ರಶಸ್ತಿ
![ಎಂಆರ್ಪಿಎಲ್ಗೆ ಭಾರತದ ಅತ್ಯುತ್ತಮ ಪಿಎಸ್ಯು ಪ್ರಶಸ್ತಿ ಎಂಆರ್ಪಿಎಲ್ಗೆ ಭಾರತದ ಅತ್ಯುತ್ತಮ ಪಿಎಸ್ಯು ಪ್ರಶಸ್ತಿ](https://www.varthabharati.in/sites/default/files/images/articles/2020/12/29/273126-1609262829.jpg)
ಮಂಗಳೂರು, ಡಿ.29: ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಜರ್ನಲ್ನಿಂದ ನೀಡಲಾಗುವ ಭಾರತದ ಅತ್ಯುತ್ತಮ ಪಿಎಸ್ಯು (ಸಾರ್ವಜನಿಕ ವಲಯದ ಉದ್ದಿಮೆ-ಪಬ್ಲಿಕ್ ಸೆಕ್ಟರ್ ಅಂಡರ್ಟೇಕಿಂಗ್ಸ್) ಪ್ರಶಸ್ತಿಯನ್ನು ನಗರದ ಎಂಆರ್ಪಿಎಲ್ ಸಂಸ್ಥೆ ಮತ್ತೆ ತನ್ನದಾಗಿಸಿಕೊಂಡಿದ್ದು, ಜರ್ನಲ್ನ ‘ವರ್ಷದ ಮಿನಿರತ್ನ ಉತ್ಪಾದನೆ’ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಎಂಆರ್ಪಿಎಲ್ ಕಚ್ಚಾ ತೈಲ ಸಂಸ್ಕರಣಾ ಘಟಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಂಗಳೂರಿನಲ್ಲಿ ಮೂರು ಘಟಕಗಳನ್ನು ಹೊಂದಿರುವ ಎಂಆರ್ಪಿಎಲ್ನಿಂದ 2019ನೇ ಸಾಲಿನಲ್ಲಿ ನೀಡಿರುವ ಕೊಡುಗೆಗೆ ಪೂರಕವಾಗಿ ಈ ಪ್ರಶಸ್ತಿ ಲಭಿಸಿದೆ ಎಂದು ಕಂಪೆನಿಯ ಪ್ರಕಟನೆ ತಿಳಿಸಿದೆ.
Next Story