ರಾಷ್ಟ್ರಧ್ವಜಕ್ಕೆ ಅಪಮಾನ ಆರೋಪ: ಹಾಂಕಾಂಗ್ ತರುಣನಿಗೆ ಜೈಲು ಶಿಕ್ಷೆ

ಹಾಂಕಾಂಗ್,ಡಿ.29: ಹಾಂಕಾಂಗ್‌ನ ಪ್ರಜಾಪ್ರಭುತ್ವ ಪರ ಹೋರಾಟಗಾರರ ವಿರುದ್ಧ ದಮನ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಚೀನಾವು ಮಂಗಳವಾರ ಚೀನಾದ ರಾಷ್ಟ್ರಧ್ವಜಕ್ಕೆ ಅಪಮಾನ ಹಾಗೂ ಕಾನೂನುಬಾಹಿರವಾಗಿ ಸಭೆ ಸೇರಿದ ಆರೋಪದಲ್ಲಿ 19 ವರ್ಷದ ತರುಣನೊಬ್ಬನಿಗೆ ನಾಲ್ಕು ತಿಂಗಳುಗಳ ಜೈಲು ಶಿಕ್ಷೆ ವಿಧಿಸಿದೆ.
2019ರ ಮೇನಲ್ಲಿ ಹಾಂಕಾಂಗ್‌ನ ಶಾಸನಸಭೆಯ ಹೊರಗೆ ನಡೆದ ಹೊಕೈ ಸಂದರ್ಭ ಚೀನಿ ಧ್ವಜವನ್ನು ಎಸೆದ ಪ್ರಕರಣದಲ್ಲಿ ಪ್ರಜಾಪ್ರಭುತ್ವ ಪರ ಗುಂಪಿನ ನೇತೃತ್ವ ವಹಿಸಿದ್ದ 19 ವರ್ಷ ವಯಸ್ಸಿನ ಟೋನಿ ಚುಂಗ್ ದೋಷಿಯೆಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿತ್ತು.
ಜೈಲು ಶಿಕ್ಷೆಯ ಅನುಭವಿಸುವ ಸಮಯದಲ್ಲಿ ಚುಂಗ್ ವಿರುದ್ಧದ ಪ್ರತ್ಯೇಕತಾವಾದ ಆರೋಪದ ತನಿಖೆಯೂ ನಡೆಯಲಿದ್ದು, ಈ ಪ್ರಕರಣದಲ್ಲಿ ತಪ್ಪಿತಸ್ಥನೆಂದು ದೃಢಪಟ್ಟಲ್ಲಿ ಚೀನಾದ ಕರಾಳ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಜೀವಾವಧಿ ಶಿಕ್ಷೆಯನ್ನು ಕೂಡಾ ವಿಧಿಸಬಹುದಾಗಿದೆ.
ಚುಂಗ್ ಅವರು ಚೀನಾದ ನೂತನ ಭದ್ರತಾ ಕಾನೂನಿನಡಿ ಬಂಧಿತನಾದ ಪ್ರಪ್ರಥಮ ರಾಜಕೀಯ ವ್ಯಕ್ತಿಯಾಗಿದ್ದಾರೆ.
Next Story





