ಜಿಯೋ ಸಿಮ್ ತ್ಯಜಿಸಲು ಕೋರಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಮಂಡ್ಯ, ಡಿ.29: ಕೃಷಿ ಮಸೂದೆ ವಿರೋಧಿಸಿ ಹಾಗೂ ಸಾರ್ವಜನಿಕರು ಜಿಯೋ ಸಿಮ್ ತಿರಸ್ಕರಿಸಿ ಬಿಎಸ್ಸೆನ್ನೆಲ್ ಪ್ರೋತ್ಸಾಹಿಸಲು ಕೋರಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ನಗರದ ಬಿಎಸ್ಸೆನ್ನೆಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದೇಶದ ಜನತೆ ದೆಹಲಿ ರೈತರ ಹೋರಾಟ ಬೆಂಬಲಿಸಬೇಕು. ಜಿಯೋ ಸಿಮ್ ತಿರಸ್ಕರಿಸಿ ಬಿಎಸ್ಸೆನ್ನೆಲ್ ಪ್ರೋತ್ಸಾಹಿಸಬೇಕು. ಕೇಂದ್ರ ಸರಕಾರ ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ಭಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷ ಬಿ.ಟಿ.ವಿಶ್ವನಾಥ್, ವಕೀಲರಾದ ಜಗನ್ನಾಥ, ತಿಮ್ಮೇಗೌಡ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಬಿಎಸ್ಸೆನ್ನೆಲ್‍ನ ಎಂ.ಸಿ.ಬಾಲಕೃಷ್ಣ, ಶ್ರೀನಿವಾಸ್, ಶಿವಣ್ಣ, ದಸಂಸ ಮುಖಂಡ ಅಂದಾನಿ ಸೋಮನಹಳ್ಳಿ, ಪತ್ರಕರ್ತರಾದ ಎಂ.ಬಿ.ನಾಗಣ್ಣಗೌಡ, ನಾಗೇಶ್, ಅಂಚೆ ಸಂಘದ ಮುಖಂಡ ರಂಗಸ್ವಾಮಿ, ರೈತ ಸಂಘದ ಸುಧೀರ್‍ಕುಮಾರ್, ಚಿತ್ರನಿರ್ದೇಶಕ ಎಂ.ಜಿ.ವಿನಯ್ ಕುಮಾರ್, ಆಟೋ ಸಂಘದ ಮುಖಂಡ ಕೃಷ್ಣ, ಅಂಗವಿಕಲರ ಸಂಘದ ಕುಮಾರ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು







