ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಬಂದ ನಾಲ್ವರಲ್ಲಿ ರೂಪಾಂತರಿತ ಕೊರೋನ ದೃಢ

ಶಿವಮೊಗ್ಗ, ಡಿ.30: ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಬಂದಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ರೂಪಾಂತರಿತ ಕೊರೋನ ಸೋಂಕು ಇರುವುದು ದೃಢಪಟ್ಟಿದೆ.
ಡಿ.22ರಂದು ಬ್ರಿಟನ್ ನಿಂದ ವಾಪಾಸಾದ ಒಂದೇ ಕುಟುಂಬದ ನಾಲ್ವರಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿತ್ತು. ಇವರಲ್ಲಿ ರೂಪಾಂತರಿತ ಕೊರೋನ ಇದೆಯೇ ಎಂದು ಪತ್ತೆ ಹಚ್ಚಲು ಇವರ ಗಂಟಲು ದ್ರವಗಳನ್ನು ಬೆಂಗಳೂರಿನಲ್ಲಿ ಪರೀಕ್ಷೆ ಮಾಡಿ, ನಂತರ ಪೂನಾದ ವೈರಾಣು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು. ಈಗ ಇವರಲ್ಲಿ ರೂಪಾಂತರಿತ ಕೊರೋನ ಇರುವುದು ದೃಢಪಟ್ಟಿದೆ. ಇವರಿಗೆ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೋನ ಸೋಂಕಿತರ ಮನೆಯ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ.
Next Story





