ಗ್ರಾಪಂ ಚುನಾವಣೆ ಫಲಿತಾಂಶ: ಸಿಎಂ ತವರಿನಲ್ಲಿ ಲಾಟರಿ ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಆಯ್ಕೆ

ಮಂಡ್ಯ, ಡಿ.30: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಗ್ರಾಮವಾದ ಕೆ.ಆರ್.ಪೇಟೆ ತಾಲೂಕು ಬೂಕನಕೆರೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಡ್ರಾ ಆಗಿದ್ದು, ಲಾಟರಿ ಮೂಲಕ ಅಭ್ಯರ್ಥಿ ಆಯ್ಕೆ ನಡೆಯಿತು.
ಜೆಡಿಎಸ್ ಬೆಂಬಲಿತ ಮಂಜುಳಾ ಹಾಗೂ ಕಾಂಗ್ರೆಸ್ ಬೆಂಬಲಿತ ರುಕ್ಮಿಣಮ್ಮ ಸಮ ಮತ ಪಡೆದರು. ಇಬ್ಬರಿಗೂ ತಲಾ 183 ಮತ ಬಂದವು. ಅಂತಿಮವಾಗಿ ಲಾಟರಿ ಎತ್ತುವ ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುಳಾ ಅವರ ಕೊರಳಿಗೆ ವಿಜಯಮಾಲೆ ಬಿತ್ತು.
Next Story





