ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ಮಂಗಳಮುಖಿ ದೇವಿಕ ಗೆಲುವು
ಗ್ರಾ.ಪಂ. ಚುನಾವಣೆಯ ಮತ ಎಣಿಕೆ

ಮೈಸೂರು, ಡಿ.30: ಗ್ರಾ.ಪಂ.ಗೆ ನಡೆದ ಚುನಾವಣೆಯಲ್ಲಿ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಿಂದ ಮಂಗಳಮುಖಿ ದೇವಿಕ ಜಯಗಳಿಸಿದ್ದಾರೆ.
ಕೆ.ಆರ್.ನಗರದ ಸಾಲಿಗ್ರಾಮ ಗ್ರಾಮ ಪಂಚಾಯತ್ ನ 7ನೇ ಬ್ಲಾಕ್ ನಿಂದ ಸ್ಪರ್ಧಿಸಿದ್ದ ದೇವಿಕ 5 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.
ಗ್ರಾ.ಪಂ. ಚುನಾವಣೆಗೆ ಸ್ಪರ್ಧೆ ಮಾಡುವ ವೇಳೆ ಹಲವರು ಇವರ ಬಗ್ಗೆ ಟೀಕೆ ಮಾಡಿದ್ದರು. ಆದರೂ ಧೃತಿಗೆಡದ ದೇವಿಕ ಗ್ರಾ.ಪಂ.ನಲ್ಲಿ ಆಗಬೇಕಿರುವ ಕೆಲಸಗಳನ್ನು ಮಾಡಿಕೊಡುವುದಾಗಿ ಹೇಳಿ ಜನರ ಮನಸ್ಸನ್ನು ಗೆದ್ದಿದ್ದಾರೆ.
Next Story





