ಉಪಸಭಾಪತಿ ಧರ್ಮೇಗೌಡ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಲೋಕಸಭಾ ಸ್ಪೀಕರ್ ಆಗ್ರಹ

ಬೆಂಗಳೂರು, ಡಿ.30: ಕರ್ನಾಟಕ ವಿಧಾನಪರಿಷತ್ತಿನ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಜೊತೆ ಸದನದಲ್ಲಿ ನಡೆದ ಘಟನೆ ದೌರ್ಭಾಗ್ಯಪೂರ್ಣ. ಲೋಕತಂತ್ರದ ಹಿರಿಮೆಯ ಮೇಲೆ ನಡೆದಂತಹ ಕಠೋರ ದಾಳಿ ಅದು. ಅವರ ಸಾವಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ನಿಷ್ಪಕ್ಷ ತನಿಖೆ ನಡೆಸುವ ಅಗತ್ಯವಿದೆ ಎಂದು ಲೋಕಸಭಾ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಟ್ವೀಟ್ ಮಾಡಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳ ಪ್ರತಿಷ್ಠೆ ಹಾಗೂ ಪೀಠಾಸೀನ ಅಧಿಕಾರಿಗಳ ಗೌರವ ಹಾಗೂ ಸ್ವಾತಂತ್ರ್ಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಧರ್ಮೇಗೌಡ ಅವರ ನಿಧನದ ಸುದ್ದಿ ಆಘಾತ ತಂದಿದೆ. ಅವರ ಕುಟುಂಬದ ಬಗ್ಗೆ ನನ್ನ ಸಂವೇದನವಿದೆ ಎಂದು ತಿಳಿಸಿದ್ದಾರೆ.
Next Story





