ಶಾಹೀನ್‌ಬಾಗ್ ಶೂಟರ್ ಕಪಿಲ್ ಗುಜ್ಜರ್‌ನನ್ನು ಪಕ್ಷಕ್ಕೆ ಸೇರಿಸಿಕೊಂಡ ಕೆಲ ಗಂಟೆಗಳಲ್ಲೇ ಉಚ್ಚಾಟಿಸಿದ ಬಿಜೆಪಿ

ಹೊಸದಿಲ್ಲಿ : ಈ ವರ್ಷದ ಫೆಬ್ರವರಿಯಲ್ಲಿ ದಿಲ್ಲಿಯ ಶಾಹೀನ್‌ಬಾಗ್‌ನಲ್ಲಿ ಕೇಂದ್ರ ಸರಕಾರದ ವಿವಾದಾತ್ಮಕ ಸಿಎಎ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿದ್ದವರ ಮೇಲೆ ಗುಂಡು ಹಾರಾಟ ನಡೆಸಿದ್ದ ಕಪಿಲ್ ಗುಜ್ಜರ್‌ನನ್ನು ಇಂದು ಪಕ್ಷಕ್ಕೆ ಸೇರಿಸಿಕೊಂಡ ಕೆಲವೇ ಗಂಟೆಗಳಲ್ಲಿ ಬಿಜೆಪಿಯು ಉಚ್ಚಾಟಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ದಿಲ್ಲಿಯ ಸಮೀಪದ ಉತ್ತರಪ್ರದೇಶ ಗಾಝಿಯಾಬಾದ್‌ನ ಬಿಜೆಪಿ ಘಟಕವು ಈ ಕುರಿತು ಪ್ರತಿಕ್ರಿಯೆ ನೀಡಿ, ಬುಧವಾರ ಬೆಳಿಗ್ಗೆ ಗುಜ್ಜರ್‌ನನ್ನು ಪಕ್ಷಕ್ಕೆ ಸೇರಿಸಿಕೊಂಡಾಗ ಆತನ ಹಿನ್ನೆಲೆ ನಮಗೆ ಗೊತ್ತಿರಲಿಲ್ಲ ಎಂದು ಹೇಳಿದೆ.
Next Story





