ಹೋಮಿಯೋಪತಿಯಲ್ಲೂ ಕೊರೋನ ಔಷಧಿ ತಯಾರಿಸಲು ಸಚಿವ ಡಾ.ಕೆ.ಸುಧಾಕರ್ ಸಲಹೆ

ಬೆಂಗಳೂರು, ಡಿ.30: ಕೊರೋನ ನಿವಾರಣೆಗೆ ಹೋಮಿಯೋಪತಿ ಪದ್ಧತಿಯಲ್ಲೂ ಔಷಧಿ ಆವಿಷ್ಕಾರ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದರು.
ಬುಧವಾರ ನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ಹೋಮಿಯೋಪತಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಸಂಶೋಧನೆಗಳು ಕಡಿಮೆಯಾಗಿವೆ. ಎಲ್ಲವನ್ನೂ ಬೇರೆ ದೇಶಗಳಿಂದ ತರಿಸಿಕೊಳ್ಳುವಂತಾಗಿದೆ. ಕೊರೋನ ನಿಯಂತ್ರಣಕ್ಕೆ ತರಲು ಆರ್ಸೆನಿಕ್ ಆಲ್ಬಂ ಎಂಬ ಹೋಮಿಯೋಪತಿ ಔಷಧಿ ಬಳಕೆಯಲ್ಲಿದೆ. ಆದರೆ ಕೊರೋನ ನಿವಾರಣೆಗೆ ಬೇರೆ ಸಂಸ್ಥೆಗಳು ಔಷಧಿ ತಯಾರಿಸುತ್ತಿರುವಂತೆ ಹೋಮಿಯೋಪತಿಯಲ್ಲೂ ಔಷಧಿ ಕಂಡುಹಿಡಿಯಬೇಕು ಎಂದರು.
ಹೋಮಿಯೋಪತಿ ಪದ್ಧತಿ ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂಬ ತತ್ವವನ್ನು ಆಧರಿಸಿದೆ. ಟೈಫಾಯಿಡ್ ಬಂದಾಗಲೂ ಹೋಮಿಯೋಪತಿ ಬಳಕೆಯಾಗಿತ್ತು. ಇಂತಹ ಪದ್ಧತಿಗೆ ಉತ್ತೇಜನ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಆಯುಷ್ ಗೆ ವಿಶೇಷ ಒತ್ತು ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಮ್ಮ ಸರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬ ಆಯುಷ್ ವೈದ್ಯರನ್ನು ನಿಯೋಜಿಸಲು ತೀರ್ಮಾನಿಸಿದೆ ಎಂದು ಅವರು ತಿಳಿಸಿದರು.
.jpg)







