ಲಿಫ್ಟ್ ನಲ್ಲಿ ಸಿಲುಕಿ ಕೂಲಿ ಕಾರ್ಮಿಕ ಮೃತ್ಯು

ಬೆಂಗಳೂರು, ಡಿ.30: ಕಟ್ಟಡದಲ್ಲಿನ ಲಿಫ್ಟ್ ನಲ್ಲಿ ಸಿಲುಕಿ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ಇಂದ್ರಜಿತ್ ಕುಮಾರ್(19) ಎಂಬುವರು ಮೃತಪಟ್ಟ ಕಾರ್ಮಿಕ ಎಂದು ಪೊಲೀಸರು ತಿಳಿಸಿದ್ದಾರೆ.
ಅಜೀತ್ ಸೇಠ್ ಕೈಗಾರಿಕಾ ಪ್ರದೇಶದ ಮನನ್ ಪ್ರಾಜೆಕ್ಟ್ ಎಂಬ ತಾಮ್ರದ ತಂತಿ ಉತ್ಪಾದನಾ ಕಾರ್ಖಾನೆಯಲ್ಲಿ ಇಂದ್ರಜಿತ್ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಮಂಗಳವಾರ ರಾತ್ರಿ ಲಿಫ್ಟ್ ನಲ್ಲಿ ಹೋಗುತ್ತಿದ್ದ ವೇಳೆ ದಿಢೀರ್ ನಿಯಂತ್ರಣ ತಪ್ಪಿ ಲಿಫ್ಟ್ ಕುಸಿದಿದೆ.
ಈ ಸಂದರ್ಭದಲ್ಲಿ ಬಾಗಿಲು ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಂಡ ಆತನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
Next Story





