ನಕಲಿ ನಗ್ನ ಭಾವಚಿತ್ರ ಬಳಸಿ 100ಕ್ಕೂ ಅಧಿಕ ಮಹಿಳೆಯರ ಬ್ಲ್ಯಾಕ್‌ಮೇಲ್: ಆರೋಪಿಯ ಬಂಧನ

ಹೊಸದಿಲ್ಲಿ, ಡಿ. 30: ನಕಲಿ ನಗ್ನ ಭಾವಚಿತ್ರಗಳನ್ನು ಬಳಸಿ 100ಕ್ಕೂ ಅಧಿಕ ಮಹಿಳೆಯರನ್ನು ಬ್ಲಾಕ್‌ಮೇಲ್ ಮಾಡಿದ ಆರೋಪದಲ್ಲಿ 26 ವರ್ಷದ ವ್ಯಕ್ತಿಯೋರ್ವರನ್ನು ಪೊಲೀಸರು ಹೊಸದಿಲ್ಲಿಯಲ್ಲಿ ಬುಧವಾರ ಬಂಧಿಸಿದ್ದಾರೆ. ಆರೋಪಿಯನ್ನು ಸುಮಿತ್ ಝಾ ಎಂದು ಗುರುತಿಸಲಾಗಿದೆ.
ಸುಮಿತ್ ಝಾ ಇತ್ತೀಚೆಗೆ ದಕ್ಷಿಣ ದಿಲ್ಲಿಯ ಮಹಿಳೆಯಿಂದ ಹಣ ಸುಲಿಗೆ ಮಾಡಲು ಯತ್ನಿಸಿದ್ದ. ಬೇಡಿಕೆ ಈಡೇರಿಸದೇ ಇದ್ದರೆ, ಅಸಭ್ಯ ಫೋಟೊಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ಛತ್ತೀಸ್‌ಗಢದಲ್ಲಿ ಇದೇ ರೀತಿಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸುಮಿತ್ ಝಾನನ್ನು ಬಂಧಿಸಿದ್ದರು. ಆಗ ಆತ ತಪ್ಪೊಪ್ಪಿಕೊಂಡು ಬಿಡುಗಡೆಯಾಗಿದ್ದ. ಮಹಿಳೆಯ ಅಸಭ್ಯ ಚಿತ್ರಗಳನ್ನು ತೆಗೆದು ಆತ ಆಗಾಗ ಹಣಕ್ಕಾಗಿ ಪೀಡಿಸುತ್ತಿದ್ದ. ಸುಮಿತ್ ಝಾನಿಂದ ಛಾಯಾಚಿತ್ರ ತೆಗೆಯಲು ಬಳಸಿದ ಮೊಬೈಲ್ ಫೋನ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಿಲ್ಲಿಯ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಸುಮಿತ್ ಝಾನ ವಿರುದ್ಧ ಸುಲಿಗೆ, ಲೈಂಗಿಕ ಕಿರುಕುಳ ಹಾಗೂ ಕ್ರಿಮಿನಲ್ ಬೆದರಿಕೆಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





