ಕೊರೋನ ಲಾಕ್‌ಡೌನ್ ನಿರ್ಬಂಧಗಳನ್ನು ಜ.31ರ ವರೆಗೆ ವಿಸ್ತರಿಸಿದ ಮಹಾರಾಷ್ಟ್ರ

ಹೊಸದಿಲ್ಲಿ, ಡಿ. 30: ಕೊರೋನ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ರಾಜ್ಯದಲ್ಲಿ ಜನವರಿ 31ರ ವರೆಗೆ ಲಾಕ್‌ಡೌನ್ ನಿರ್ಬಂಧಗಳನ್ನು ವಿಸ್ತರಿಸಿದೆ. ಇದಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಸರಕಾರ ಡಿಸೆಂಬರ್ 29ರಂದು ಸುತ್ತೋಲೆ ಹೊರಡಿಸಿದೆ.
‘‘ರಾಜ್ಯದಲ್ಲಿ ಕೊರೋನ ವೈರಸ್ ಹರಡುವ ಬೆದರಿಕೆ ಇದೆ. ಆದುದರಿಂದ ಅದನ್ನು ತಡೆಯಲು ನಿರ್ದಿಷ್ಟ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯಾದ್ಯಂತ ಲಾಕ್‌ಡೌನ್ ಅನ್ನು ಜನವರಿ 31ರ ವರೆಗೆ ವಿಸ್ತರಿಸಲಾಗಿದೆ’’ ಎಂದು ಸುತ್ತೋಲೆ ಹೇಳಿದೆ. ಕಳೆದ ಕೆಲವು ತಿಂಗಳಲ್ಲಿ ಮಹಾರಾಷ್ಟ್ರ ಸರಕಾರ ಹಲವು ಲಾಕ್‌ಡೌನ್ ನಿರ್ಬಂಧಗಳನ್ನು ಹೇರಿತ್ತು. ಕಳೆದ ತಿಂಗಳು ಸರಕಾರ ಆರಾಧನಾ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿತ್ತು. ರಾಜ್ಯದ ಕೆಲವು ಭಾಗಗಳಲ್ಲಿ 9ರಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಶಾಲೆ ತೆರೆಯಲಾಗಿತ್ತು.
Next Story





