ಉಡುಪಿ: ವೆಲ್‌ಫೇರ್ ಪಾರ್ಟಿ ಬೆಂಬಲಿತ ವೈದ್ಯ ಸಹಿತ ಐವರಿಗೆ ಜಯ
ಉಡುಪಿ, ಡಿ.30: ತೋನ್ಸೆ ಕೆಮ್ಮಣ್ಣು ಗ್ರಾಪಂನಲ್ಲಿ ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಬೆಂಬಲಿತ ವೈದ್ಯ ಸೇರಿದಂತೆ ಐದು ಮಂದಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಪಡುತೋನ್ಸೆ-5 ಕ್ಷೇತ್ರದಲ್ಲಿ ಮುಹಮ್ಮದ್ ಇದ್ರೀಸ್ ಮತ್ತು ಜಮೀಲಾ ಸದಿದಾ, ಪಡುತೋನ್ಸೆ-7 ಕ್ಷೇತ್ರದಲ್ಲಿ ಮುಮ್ತಾಜ್ ಮತ್ತು ವಿಜಯ, ಪಡು ತೋನ್ಸೆ -8 ಕ್ಷೇತ್ರದಲ್ಲಿ ಡಾ.ಮುಹಮ್ಮದ್ ಫಹೀಮ್ ಅಬ್ದುಲ್ಲಾ ಆಯ್ಕೆಯಾಗಿದ್ದಾರೆ.
ಬಿಎಎಂಎಸ್ ಪದವಿ ಪಡೆದಿರುವ ಡಾ.ಮುಹಮ್ಮದ್ ಫಹೀಮ್, ಇದೀಗ ಉದ್ಯಾವರ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ಇವರು ಗುಜ್ಜರಬೆಟ್ಟುವಿನಲ್ಲಿ ಕ್ಲಿನಿಕ್ ಇಟ್ಟು ವೈದ್ಯ ವೃತ್ತಿ ನಡೆಸುತ್ತಿದ್ದಾರೆ. ಇವರು ಮೂರು ಮಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.
Next Story





