ಬ್ಯಾರಿ ಸಾಂಸ್ಕೃತಿಕ ಭವನಕ್ಕೆ ತಡೆ : ಮುಸ್ಲಿಂ ಒಕ್ಕೂಟ ಖಂಡನೆ
ಮಂಗಳೂರು, ಡಿ.30: ತೊಕ್ಕೊಟ್ಟು ಸಮೀಪ ನಿರ್ಮಾಣವಾಗಲಿದ್ದ ಬ್ಯಾರಿ ಅಕಾಡಮಿಯ ಸಾಂಸ್ಕೃತಿಕ ಭವನಕ್ಕೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಅಶ್ರಫ್ ತಿಳಿಸಿದ್ದಾರೆ.
ಅಕಾಡಮಿಯ ಭವನಕ್ಕೂ ಒಂದು ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಕಲೆ,ಸಾಹಿತ್ಯ ಭಾಷೆಯ ಹೆಸರಲ್ಲಿ ಕೋಮು ಬಣ್ಣ ಬಳಿಯುವುದು ಯಾವ ನ್ಯಾಯ? ಕೊಂಕಣಿ, ಕೊಡವ, ಅರೆಭಾಷೆ, ತುಳು ಭವನಗಳ ನಿರ್ಮಾಣದ ಸಂದರ್ಭದಲ್ಲಿ ಇಲ್ಲದ ವಿರೋಧ ಬ್ಯಾರಿ ಸಾಂಸ್ಕೃತಿಕ ಭವನಕ್ಕೆ ಯಾಕೆ ? ಎಂದು ಪ್ರಶ್ನಿಸಿರುವ ಅಶ್ರಫ್ ಸರಕಾರ ಪೊಲೀಸ್ ರಕ್ಷಣೆಯಲ್ಲಿ ಈ ಕಾರ್ಯಕ್ರಮ ನಡೆಸಬೇಕಿತ್ತು. ಆದರೆ ಸರಕಾರದ ನಿಲುವು ಕೂಡ ಸಂಶಯಕ್ಕೆ ಎಡೆ ಮಾಡಿದೆ. ಇತರ ಹಲವು ವಿಷಯದಲ್ಲಿ ಕೋಮುವಾದದ ನಿಲುವು ತಾಳಿರುವ ಸರಕಾರ ಇದೀಗ ಭಾಷೆ ಕಲೆ ಸಾಹಿತ್ಯದ ಹೆಸರಲ್ಲಿ ಉಂಟಾಗಿರುವ ವಿರೋಧವನ್ನು ಹತ್ತಿಕ್ಕಲು ತಕ್ಷಣ ಮುಂದಾಗಬೇಕು. ಇಲ್ಲದಿದ್ದರೆ ಸರಕಾರದ ದ್ವಿಮುಖ ನೀತಿಯ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ ಎಂದು ಅಶ್ರಫ್ ತಿಳಿಸಿದ್ದಾರೆ
Next Story





