ಅಮೆರಿಕದ ರೂಪಾಂತರಿತ ವೈರಸ್: ಸೋಂಕಿತ ವಿದೇಶಕ್ಕೆ ಪ್ರಯಾಣಿಸಿರಲಿಲ್ಲ

ನ್ಯೂಯಾರ್ಕ್,ಡಿ.30:ಅಮೆರಿಕದ ಪ್ರಪ್ರಥಮ ರೂಪಾಂತರಿ ಕೊರೋನ ಸೋಂಕಿತ ವ್ಯಕ್ತಿಯು ಬ್ರಿಟನ್ ಸೇರಿದಂತೆ ಯಾವುದೇ ದೇಶಕ್ಕೆ ಪ್ರಯಾಣಿಸಿರಲಿಲ್ಲವೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಇದರೊಂದಿಗೆ ಕೊಲೆರಾಡೊ ರಾಜ್ಯದಲ್ಲಿ ಪತ್ತೆಯಾಗಿರುವ ರೂಪಾಂತರಿತ ಕೊರೋನ ವೈರಸ್‌ನ ಮೂಲದ ಬಗ್ಗೆ ಹಲವಾರು ಪ್ರಶ್ನೆಗಳು ಮೂಡಿವೆಯೆಂದು ವರದಿಗಳು ತಿಳಿಸಿವೆ.
ರೂಪಾಂತರಿತ ಕೊರೋನ ಸೋಂಕಿತನು 20ರ ಹರೆಯದವನಾಗಿದ್ದು ಡೆನ್ವೆರ್ ನಗರದ ಹೊರವಲಯದಲ್ಲಿ ಗ್ರಾಮಾಂತರ ಪ್ರದೇಶದ ನಿವಾಸಿಯೆಂದು ತಿಳಿದುಬಂದಿದೆ.
Next Story





