ಜ.1-ಮಾ.31ರವರೆಗೆ ‘ಜನರ ಬಳಿಗೆ ನಮ್ಮ ಬ್ಯಾಂಕ್’ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಅಭಿಯಾನ: ಡಾ. ರಾಜೇಂದ್ರ ಕುಮಾರ್

ಮಂಗಳೂರು, ಡಿ.31: ಬ್ಯಾಂಕಿಂಗ್ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಜನವರಿ 1ರಿಂದ ಮಾರ್ಚ್ 31ರವರೆಗೆ ಜನರ ಬಳಿಗೆ ನಮ್ಮ ಬ್ಯಾಂಕ್ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಎಸ್‌ಸಿಡಿಸಿಸಿ ಕಚೇರಿಯಲ್ಲಿಂದು ಆನ್‌ಲೈನ್ ಮೂಲಕ ಮೂಲಕ ನಡೆದ ಸುದ್ದಿಗೋಷ್ಠಿ ಈ ವಿಷಯ ತಿಳಿಸಿದ ಅವರು, ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆಯ ಬಗ್ಗೆ ಜಾಗೃತಿ ಮೂಡಿಸಿ ಜನರನ್ನು ಬ್ಯಾಂಕಿಂಗ್ ಸೌಲಭ್ಯದೊಂದಿಗೆ ಸ್ವಾವಲಂಬಿಗಳನ್ನಾಗಿ ಮಾಡು ವಂತೆ ಉತ್ತೇಜನ ನೀಡುವುದು ಮತ್ತು ಹೊಸ ಗ್ರಾಹಕರನ್ನು ಆಕರ್ಷಿಸುವ ಉದ್ದೇಶ ಈ ಅಭಿಯಾನದ್ದಾಗಿದೆ ಎಂದರು.
ಈ ಅಭಿಯಾನದಡಿ ಸಂಚಯ/ ಚಾಲ್ತಿ ಖಾತೆ ತೆರೆಯುವ, ಸಣ್ಣ ಉದ್ದಿಮೆಗಳಿಗೆ ಸಾಲ, ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಕೃಷಿ ಮತ್ತು ಕೃಷಿಯೇತರ ಸಾಲ ಮತ್ತು ಸ್ವಸಹಾಯ ಗುಂಪುಗಳಿಗೆ ವಿೇಷವಾಗಿ ಸಾಲ ನೀಡಲು ನಿರ್ಧರಿಸಲಾಗಿದೆ
ಎಸ್‌ಸಿಡಿಸಿಸಿ ಬ್ಯಾಂಕ್ ತನ್ನ ಗ್ರಾಹಕರ ಹಿತ ಕಾಪಾಡುವಲ್ಲಿ ಮುಂದಿದೆ. ಬ್ಯಾಂಕ್‌ನಲ್ಲಿ ಸಂಚಯ ಹಾಗೂ ಚಾಲ್ತಿ ಖಾತೆ ತೆರೆಯುವ ಗ್ರಾಹಕರಿಗೆ ವಿಶೇಷ ವಿಮಾ ಸೌಲಭ್ಯವನ್ನು ಬ್ಯಾಂಕ್ ನೀಡಲಿದೆ. ಸಂಚಯ/ ಚಾಲ್ತಿ ಖಾತೆಗಳಲ್ಲಿ ಅಪಘಾತಕ್ಕೆ ಮೊದಲಿನ 90 ದಿನಗಳಲ್ಲಿ ಸತತವಾಗಿ 20,000 ರೂ. ಇದ್ದಲ್ಲಿ ಗ್ರಾಹಕ ಮೃತಪಟ್ಟಲ್ಲಿ 2 ಲಕ್ಷ ರೂ.ವರೆಗೆ ವಿಮಾ ಸೌಲಭ್ಯ ಹಾಗೂ ಅಂಗ ಊನತೆಗೆ 1 ಲಕ್ಷ ರೂ. ವಿಮಾ ಪರಿಹಾರ ಹಾಗೂ 25000 ರೂ.ವರೆಗೆ ಆಸ್ಪತ್ರೆ ವೆಚ್ಚದ ಸೌಲಭ್ಯ ಲಭ್ಯವಾಗಲಿದೆ.
ಹೆಚ್ಚು ಖಾತೆ ತೆರೆಯುವ, ಠೇವಣಿ ಸಂಗ್ರಹ ಹಾಗೂ ಸಾಲ ನೀಡುವ ಮೂಲಕ ನಿರಂತರ ಬ್ಯಾಂಕಿಂಗ್ ವ್ಯವಹಾರ ನಡೆಸುವ ಗ್ರಾಹಕರನ್ನು ಆಕರ್ಷಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ಪ್ರವರ್ತಿತ ನವೋದಯ ಸ್ವ ಸಹಾಯ ಸಂಘಗಳು ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಜನರಿಗೆ ಆರ್ಥಿಕ ಚೈತನ್ಯ ವನ್ನು ತುಂಬಿದೆ. ಹಾಗಾಗಿ ನವೋದಯ ಸಂಘಕ್ಕೆ ಸೇರಿ ಸ್ವಾವಲಂಬಿ ಜೀವನ ರೂಪಿಸಿ ಎಂಬ ಜನಜಾಗೃತಿಯನ್ನು ಅಭಿಯಾನದಲ್ಲಿ ಮೂಡಿಸ ಲಾಗುವುದು ಎಂದು ಅವರು ಹೇಳಿದರು.
ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್‌ಎಸ್. ಕೋಟ್ಯಾನ್, ಎಸ್.ರಾಜು ಪೂಜಾರಿ, ವಾದಿರಾಜ್ ಶೆಟ್ಟಿ ಎಂ., ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ, ರಾಜೇಶ್‌ರಾವ್, ಎಸ್.ಬಿ.ಜಯರಾಮ್‌ರೈ, ಜೈರಾಜ್ ಬಿ.ರೈ, ಮೋನಪ್ಪ ಶೆಟ್ಟಿಎಕ್ಕಾರು, ಹರೀಶ್ಚಂದ್ರ, ಸದಾಶಿವ ಉಳ್ಳಾಲ್, ಉಪ ನಿಬಂಧಕರಾದ ಪ್ರವೀಣ್ ಬಿ. ನಾಯಕ್, ಸಿಇಒ ರವೀಂದ್ರ ಬಿ, ಮಹಾ ಪ್ರಬಂಧಕರಾದ ಗೋಪಿನಾಥ್ ಭಟ್ ಉಪಸ್ಥಿತರಿದ್ದರು.
ಕಂಕನಾಡಿ ಹಾಗೂ ಬಿ.ಸಿ.ರೋಡ್‌ನಲ್ಲಿ ಎಟಿಎಂ
ಎಸ್‌ಸಿಡಿಸಿಸಿ ಬ್ಯಾಂಕ್ ದಿನದ 24 ಗಂಟೆಯೂ ಗ್ರಾಹಕರಿಗೆ ಸ್ಪಂದಿಸುವ ಉದ್ದೇಶದಿಂದ ಮಂಗಳೂರಿನ ಕಂಕನಾಡಿ ಹಾಗೂ ಬಿ.ಸಿ.ರೋಡ್‌ನಲ್ಲಿ ಎಟಿಎಂ ಕೇಂದ್ರ ತೆರೆಯಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿಯೂ ಎಟಿಎಂ ಸೌಲಭ್ಯ ವಿಸ್ತರಿಸಲಾಗುವುದು ಎಂದು ಡಾ. ರಾಜೇಂದ್ರ ಕುಮಾರ್ ತಿಳಿಸಿದರು.
ಉಡುಪಿ ಜಿಲ್ಲೆಗೆ ಮೊಬೈಲ್ ಬ್ಯಾಂಕಿಂಗ್
ಎಸ್‌ಸಿಡಿಸಿ ಬ್ಯಾಂಕ್‌ನಿಂದ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಎಂಬ ಪರಿಕಲ್ಪನೆಯೊಂದಿಗೆ ಮೊಬೈಲ್ ಬ್ಯಾಂಕಿಂಗ್ ಯೋಜನೆಯನ್ನು 2007ರಲ್ಲಿ ಜಾರಿಗೆ ತಂದಿತ್ತು. ಇದೀಗ ಉಡುಪಿ ಜಿಲ್ಲೆಗೂ ಈ ಯೋಜನೆಯನ್ನು ವಿಸ್ತರಿಸುವ ಕಾರ್ಯಯೋಜನೆಯನ್ನು ಬ್ಯಾಂಕ್ ರೂಪಿಸಿದೆ ಎಂದು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
‘ಜನರ ಬಳಿಗೆ ನಮ್ಮ ಬ್ಯಾಂಕ್’ಅಭಿಯಾನದ ಅವಧಿಯಲ್ಲಿ ಅರ್ಜಿದಾರರಿಗೆ ಶೀಘ್ರ ಸಾಲ ಮಂಜೂರಾತಿ ಮತ್ತು ಪಡೆದ ಸಾಲಗಲಿಗೆ ಪ್ರಥಮ ತಿಂಗಳ ಬಡಿ್ಡ ವಿನಾಯಿತಿಯನ್ನು ನೀಡಲಾಗುವುದು.
ಡಾ. ರಾಜೇಂದ್ರ ಕುಮಾರ್








