ಉಡುಪಿ: ಆನ್‌ಲೈನ್ ಮೂಲಕ ಲಕ್ಷ ರೂ.ಗೆ ಪಂಗನಾಮ
ಉಡುಪಿ, ಡಿ.31: ತಾನು ಎಸ್‌ಬಿಐ ಕ್ರೆಡಿಟ್ ಕಾರ್ಡ್ ವಿಭಾಗದಿಂದ ಕರೆ ಮಾಡುವುದಾಗಿ ನಂಬಿಸಿದ ಯಾರೋ ಅಪರಿಚಿತನೊಬ್ಬ ಉಡುಪಿಯ ಕೀರ್ತನ್ ಎಸ್.ಕುಂದರ್ ಎಂಬವರನ್ನು ನಂಬಿಸಿ ಅವರಿಂದ ಎರಡು ಕ್ರೆಡಿಟ್ ಕಾರ್ಡ್ ನಂಬರ್, ಸಿವಿವಿ ನಂಬರ್ ಹಾಗೂ ಓಟಿಪಿ ನಂಬರನ್ನು ಪಡೆದು ಒಟ್ಟು 1.05 ಲಕ್ಷ ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ತನಗೆ ವಂಚಿಸಿರುವುದಾಗಿ ದೂರು ನೀಡಿದ್ದು, ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Next Story





