ಚೀನಾ: ಉಯಿಘರ್ ವೈದ್ಯೆಗೆ 20 ವರ್ಷ ಜೈಲುಬೀಜಿಂಗ್

ಚೀನಾ ಜ. 1: ಉಯಿಘರ್ ಮುಸ್ಲಿಮ್ ವೈದ್ಯೆಯೊಬ್ಬರನ್ನು ಭಯೋತ್ಪಾದನೆ ಆರೋಪದಲ್ಲಿ ಜೈಲಿಗೆ ಹಾಕಲಾಗಿದೆ ಎನ್ನುವುದನ್ನು ಚೀನಾ ಗುರುವಾರ ಖಚಿತಪಡಿಸಿದೆ.ವೈದ್ಯೆ ಗುಲ್ಶನ್ ಅಬ್ಬಾಸ್ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂಬುದಾಗಿ ಅವರ ಕುಟುಂಬ ಸದಸ್ಯರು ಅವೆುರಿಕದ ರಾಜಕಾರಣಿಗಳಿಗೆ ತಿಳಿಸಿದ ಒಂದು ದಿನದ ಬಳಿಕ ಚೀನಾ ಈ ಸುದ್ದಿಯನ್ನು ಖಚಿತಪಡಿಸಿದೆ.ಅವರನ್ನು ಎರಡು ವರ್ಷಗಳ ಹಿಂದೆ ಬಂಧನ ಶಿಬಿರಕ್ಕೆ ಹಾಕಲಾಗಿತ್ತು. ಬಳಿಕ ಉಯಿಘರ್ ಪರ ಚಟುವಟಿಕೆಗಳಿಗಾಗಿ ಅವರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
Next Story