ಹರೇಕಳದಲ್ಲಿ ಶಾಲಾ ಪ್ರಾರಂಭೋತ್ಸವ
![ಹರೇಕಳದಲ್ಲಿ ಶಾಲಾ ಪ್ರಾರಂಭೋತ್ಸವ ಹರೇಕಳದಲ್ಲಿ ಶಾಲಾ ಪ್ರಾರಂಭೋತ್ಸವ](https://www.varthabharati.in/sites/default/files/images/articles/2021/01/1/273491-1609523841.jpg)
ಕೊಣಾಜೆ: ಹರೇಕಳದ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭ ಉತ್ಸವವು ಶುಕ್ರವಾರ ನಡೆಯಿತು. ಈ ಸಂದರ್ಭದಲ್ಲಿ ಸೌಜನ್ಯ ಸ್ಕೌಟ್ ದಳದ ವತಿಯಿಂದ ಮಕ್ಕಳಿಗೆ ಥರ್ಮಾಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಯಿತು. ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲೆಯನ್ನು ಅಲಂಕರಿಸುವುದರೊಂದಿಗೆ ಪ್ರೀತಿಯಿಂದ ಶಿಕ್ಷಕರು ಬರಮಾಡಿ ಕೊಂಡರು.
ಇದೆ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರಾದ ಜ್ಯೋತಿ ಅವರು ಭಾಗವಹಿಸಿ ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ, ಆತ್ಮಸ್ಥೈರ್ಯದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಶಿಕ್ಷಕರಾದ ತ್ಯಾಗಮ್ ಹರೇಕಳ, ಮೋಹಿನಿ, ಕುಮುದ, ಕೃಷ್ಣ ಶಾಸ್ತ್ರೀ, ಶಿವಕುಮಾರ್, ನೂತನ, ಸ್ಮಿತಾ ಕುಮಾರಿ, ಸುಶ್ಮಿತಾ ಮೊದಲಾದವರು ಉಪಸ್ಥಿತರಿದ್ದರು.
![](https://www.varthabharati.in/sites/default/files/images/galllery/2021/01/1/IMG-20210101-WA0145.jpg)
Next Story