ಮಲ್ಪೆ: ಮೀನು ಸಾಗಾಟದ ವಾಹನ ಢಿಕ್ಕಿ; ಸ್ಕೂಟರ್ ಸವಾರ ಮೃತ್ಯು
![ಮಲ್ಪೆ: ಮೀನು ಸಾಗಾಟದ ವಾಹನ ಢಿಕ್ಕಿ; ಸ್ಕೂಟರ್ ಸವಾರ ಮೃತ್ಯು ಮಲ್ಪೆ: ಮೀನು ಸಾಗಾಟದ ವಾಹನ ಢಿಕ್ಕಿ; ಸ್ಕೂಟರ್ ಸವಾರ ಮೃತ್ಯು](https://www.varthabharati.in/sites/default/files/images/articles/2021/01/2/273511-1609559471.gif)
ಉಡುಪಿ, ಜ.2: ಸ್ಕೂಟರಿಗೆ ಮೀನು ಸಾಗಾಟ ಮಾಡುವ ಇನ್ಸುಲೇಟರ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಇಂದು ಬೆಳಗಿನ ಜಾವ 4:30ರ ಸುಮಾರಿಗೆ ಮಲ್ಪೆ ತೊಟ್ಟಂ ಸಮೀಪ ನಡೆದಿದೆ.
ಮೃತರನ್ನು ಇಸಾಕ್ ಹೂಡೆ ಎಂದು ಗುರುತಿಸಲಾಗಿದೆ. ಹೂಡೆಯಿಂದ ಮಲ್ಪೆ ಕಡೆಗೆ ಹೋಗುತ್ತಿದ್ದ ಸ್ಕೂಟರಿಗೆ ಇನ್ಸುಲೇಟರ್ ಎದುರಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಕೊನೆಯುಸಿರೆಳೆದರು ಎನ್ನಲಾಗಿದೆ.
ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Next Story