ಷೇರು ಮಾರಾಟಕ್ಕೆ 'ಕುಟಿಲತಂತ್ರ'ದ ಆರೋಪ: ಮುಖೇಶ್ ಅಂಬಾನಿಗೆ ದಂಡ

ಮುಂಬೈ, ಜ.2: ರಿಲಯನ್ಸ್ ಪೆಟ್ರೋಲಿಯಂ ಷೇರುಗಳ ಮಾರಾಟದಲ್ಲಿ ಕುಟಿಲ ಮಾರಾಟತಂತ್ರ ಅನುಸರಿಸಿದ ಆರೋಪದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಮುಖೇಶ್ ಅಂಬಾನಿ ಮತ್ತು ಇತರ ಎರಡು ಸಂಸ್ಥೆಗಳಿಗೆ ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾದ ಸೆಬಿ 70 ಕೋಟಿ ರೂ. ದಂಡ ವಿಧಿಸಿದೆ.
ರಿಲಯನ್ಸ್ ಪೆಟ್ರೋಲಿಯಂ 2009ರಲ್ಲಿ ಆರ್‌ಐಎಲ್‌ನಲ್ಲಿ ವಿಲೀನವಾಗಿದ್ದು, ಹದಿಮೂರು ವರ್ಷ ಹಳೆಯ ಪ್ರಕರಣದಲ್ಲಿ ಆರ್‌ಐಎಲ್ ಹಾಗೂ ಅಂಬಾನಿಗೆ ದಂಡ ವಿಧಿಸಲಾಗಿದೆ. "ಆರ್‌ಐಎಲ್ ಹಾಗೂ ಅದರ ಜತೆ ನಿಕಟ ಸಂಪರ್ಕ ಹೊಂದಿದ್ದ ಇತರ ಹಲವು ಸಂಸ್ಥೆಗಳು 2007ರ ನವೆಂಬರ್‌ನಲ್ಲಿ ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ಏಕಕಾಲಕ್ಕೆ ಆರ್‌ಪಿಎಲ್ ವಹಿವಾಟನ್ನು ನಗದು ರೂಪದಲ್ಲಿ ಮತ್ತು ಉತ್ಪನ್ನ ವಲಯದಲ್ಲಿ ನಡೆಸಿವೆ" ಎಂದು ಸೆಬಿ 95 ಪುಟಗಳ ಆದೇಶದಲ್ಲಿ ಉಲ್ಲೇಖಿಸಿದೆ.
ಆರ್‌ಐಎಲ್‌ಗೆ 25 ಕೋಟಿ ರೂ., ಕಂಪೆನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಂಬಾನಿಗೆ 15 ಕೋಟಿ ರೂ., ನವಿ ಮುಂಬೈ ಎಸ್‌ಇಝೆಡ್‌ಗೆ 20 ಕೋಟಿ ಮತ್ತು ಮುಂಬೈ ಎಸ್‌ಇಝೆಡ್‌ಗೆ 10 ಕೋಟಿ ರೂ. ದಂಡ ವಿಧಿಸಲಾಗಿದೆ.
Next Story





