ಪುಲ್ವಾಮದಲ್ಲಿ ಗ್ರೆನೇಡ್ ದಾಳಿ: ಆರು ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ
ಪುಲ್ವಾಮ,ಜ.02: ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರು ಸೈನಿಕರ ವಿರುದ್ಧ ಗ್ರೆನೇಡ್ ದಾಳಿ ನಡೆಸಿದ್ದು, ದಾಳಿಯಲ್ಲಿ ಒಟ್ಟು 6 ಮಂದಿ ನಾಗರಿಕರು ಗಾಯಗೊಂಡ ಕುರಿತು ವರದಿಯಾಗಿದೆ.
ದಕ್ಷಿಣ ಕಾಶ್ಮೀರದ ತ್ರಾಲ್ ನಲ್ಲಿ ಸೈನಿಕರ ವಿರುದ್ಧ ಪ್ರಯೋಗಿಸಿದ್ದ ಗ್ರೆನೇಡ್ ಪಕ್ಕದಲ್ಲಿನ ಬಸ್ ನಿಲ್ದಾಣದ ಬಳಿಯಲ್ಲಿರುವ ಮಾರ್ಕೆಟ್ ನಲ್ಲಿ ಸ್ಫೋಟಗೊಂಡಿದ್ದು, ಅಲ್ಲಿದ್ದ 6 ಮಂದಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಗ್ರೆನೇಡ್ ಅನ್ನು ಪೊಲೀಸ್ ಮತ್ತು ಸೈನಿಕರನ್ನು ಗುರಿಯಾಗಿಸಿ ಸ್ಫೋಟಗೊಳಿಸಲು ಸಂಚು ಹೂಡಲಾಗಿತ್ತು. ಆದರೆ ಅದು ಮಾರ್ಕೆಟ್ ಕಡೆ ಸ್ಫೋಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆಂದು timesofindia.com ವರದಿ ಮಾಡಿದೆ. ಸದ್ಯ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
Next Story





