ಸೌರವ್ ಗಂಗೂಲಿಗೆ ಲಘು ಹೃದಯಾಘಾತ

ಕೊಲ್ಕತ್ತಾ,ಜ.2: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಕಾರ್ಯಾಧ್ಯಕ್ಷ ಸೌರವ್ ಗಂಗೂಲಿ ಲಘು ಹೃದಯಾಘಾತಕ್ಕೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು timesofindia.com ವರದಿ ಮಾಡಿದೆ.ಕೊಲ್ಕತ್ತಾದ ವುಡ್ ಲ್ಯಾಂಡ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ಎಂಜಿಯೋಪ್ಲಾಸ್ಟ್ ಚಿಕಿತ್ಸೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗಿನ ವ್ಯಾಯಾಮದ ಬಳಿಕ ಸಣ್ಣದಾಗಿ ಅವರಿಗೆ ಎದೆನೋವು ಕಾಣಿಸಿಕೊಂಡ ಬಳಿಕ ಅಸ್ವಸ್ಥತೆ ಉಂಟಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದು ಬಂದಿದೆ. "ಹೃದಯನಾಳದಲ್ಲಿ ಸಣ್ಣ ಅಡೆತಡೆಗಳು ಇದ್ದು, ಎಂಜಿಯೋಗ್ರಫಿ ನಡೆಸಿದ ಬಳಿಕ ಎಂಜಿಯೋಪ್ಲಾಸ್ಟ್ ನಡೆಸಲಾಗುವುದು. ಸದ್ಯ ಗಂಭೀರಾವಸ್ಥೆಯಿಂದ ಪಾರಾಗಿದ್ದು, ಆರೋಗ್ಯವು ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದ್ದಾಗಿ indianexpress.com ವರದಿ ಮಾಡಿದೆ.
Next Story





