ಯುನಿವೆಫ್ ಕರ್ನಾಟಕದಿಂದ ಕುದ್ರೋಳಿಯಲ್ಲಿ ಸೀರತ್ ಸಮಾವೇಶ

ಮಂಗಳೂರು, ಜ.2: ಯುನಿವೆಫ್ ಕರ್ನಾಟಕ’ ಹಮ್ಮಿಕೊಂಡಿರುವ ‘ಸಾಮಾಜಿಕ ತಾರತಮ್ಯ ಮತ್ತು ಪ್ರವಾದಿ ಮುಹಮ್ಮದ್ (ಸ.)’ ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಅಂಗವಾಗಿ ಕುದ್ರೋಳಿ ಶಾಖೆಯ ವತಿಯಿಂದ ಡಿ.25ರಂದು ಕುದ್ರೋಳಿಯ ಎ1 ಭಾಗ್ ನಲ್ಲಿ ಸೀರತ್ ಸಮಾವೇಶ ನಡೆಯಿತು.
‘ಭಾರತದಲ್ಲಿ ಇಸ್ಲಾಮ್ ಮತ್ತು ಪ್ರವಾದಿ(ಸ.)’ ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತನಾಡಿ, ಪ್ರವಾದಿ ಮುಹಮ್ಮದ್(ಸ.) ತನ್ನ 23 ವರ್ಷಗಳ ಜೀವನದಲ್ಲಿ ಎಲ್ಲ ಅಡೆತಡೆಗಳನ್ನೂ ಎದುರಿಸಿ ತಮ್ಮ ದೌತ್ಯವನ್ನು ಪೂರ್ತೀಕರಿಸಿ ಒಂದು ಸುಸಂಸ್ಕೃತ ನಾಗರಿಕತೆಯನ್ನು ಈ ಪ್ರಪಂಚಕ್ಕೆ ನೀಡಿ ಹೋದರು. ಅವರ ಬೋಧನೆಗಳ ಕಟ್ಟುನಿಟ್ಟಿನ ಅನುಷ್ಠಾನದಿಂದ ನಾವೂ ಬದಲಾವಣೆ ತರಲು ಸಾಧ್ಯ’ ಎಂದರು.
ಕುದ್ರೋಳಿಯ ಕಾರ್ಪೊರೇಟರ್ ಶಂಸುದ್ದೀನ್ ಎಚ್.ಬಿ.ಟಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಭಿಯಾನ ಸಂಚಾಲಕ ವಕಾಝ್ ಅರ್ಶಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಯೀದ್ ಅಹ್ಮದ್ ಕಿರಾಅತ್ ಪಠಿಸಿದರು. ಮುಹಮ್ಮದ್ ನಬೀಲ್ ಶಾಬಾನ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಕುದ್ರೋಳಿ ಸಲಹಾ ಸಮಿತಿ ಸದಸ್ಯ ಅಬೂಬಕರ್ ಉಪಸ್ಥಿತರಿದ್ದರು.






.gif)
.gif)

