ಪುತ್ತೂರು : ವಿದ್ಯಾರ್ಥಿನಿ ಆತ್ಮಹತ್ಯೆ
ಪುತ್ತೂರು: ಮನನೊಂದ ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾದ ಘಟನೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ನೇರೋಳ್ತಡ್ಕದಲ್ಲಿ ನಡೆದಿದೆ.
ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ 9 ನೇ ತರಗತಿ ವಿದ್ಯಾರ್ಥಿನಿ, ಪಾಲ್ತಾಡಿ ಗ್ರಾಮದ ನೇರೋಲ್ತಡ್ಕ ರಾಮ ಎಂಬವರ ಪುತ್ರಿ ದಿವ್ಯಾ ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
ಶುಕ್ರವಾರ ಶಾಲೆ ಆರಂಭವಾಗಿದ್ದರಿಂದ ಶಾಲೆಗೆ ಹೋಗುವುದಾಗಿ ಹೇಳಿ ಮನೆಯ ಪಕ್ಕದ ಗೇರು ಬೀಜ ಗುಡ್ಡೆಯಲ್ಲಿ ಮರವೊಂದಕ್ಕೆ ಚೂಡಿದಾರದ ಶಾಲ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಮುಖದ ಮೇಲಿನ ಮೊಡವೆಯಿಂದ ದಿವ್ಯಾ ಮನನೊಂದಿದ್ದಳು ಎಂದು ತಿಳಿದುಬಂದಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





