ಬೆಳ್ತಂಗಡಿ : ರಿಕ್ಷಾ - ಓಮ್ನಿ ಮುಖಾಮುಖಿ ಢಿಕ್ಕಿ; ಓರ್ವ ಮೃತ್ಯು

ಬೆಳ್ತಂಗಡಿ: ಅಳದಂಗಡಿ ಸನಿಹದ ಕೆದ್ದು ಎಂಬಲ್ಲಿ ರಿಕ್ಷಾ ಹಾಗು ಓಮ್ನಿ ಮುಖಾಮುಖಿ ಢಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಪಿಲ್ಯದ ಕಡೆಯಿಂದ ಗುರುವಾಯನಕೆರೆ ಕಡೆಗೆ ಹೋಗುತ್ತಿದ್ದ ರಿಕ್ಷಾ ಹಾಗು ಗುರುವಾಯನಕೆರೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ಪರಸ್ಪರ ಢಿಕ್ಕಿಯಾಗಿ ಆಟೋದಲ್ಲಿದ್ದ ಪಿಲ್ಯ ನಿವಾಸಿ ಭುಜಬಲಿ ಹೆಗ್ಡೆ ( 60) ತೀವ್ರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಆಟೋ ಚಾಲಕ ಶಶಿಧರ ಹಾಗು ಆಟೋದಲ್ಲಿದ್ದ ಮೃತರ ಪತ್ನಿ ಲಲಿತಾ ಗಂಭೀರ ಗಾಯಗೊಂಡಿದ್ದು, ಮಗ ಅಭಿಜಿತ್ ಕೂಡ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓಮ್ನಿಯಲ್ಲಿದ್ದ ಉಷಾ ಹಾಗು ನಾಗಭೂಷಣ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
Next Story





