‘ಪಿಯುಸಿಎಲ್' ನೂತನ ಪದಾಧಿಕಾರಿಗಳ ಆಯ್ಕೆ
ಬೆಂಗಳೂರು, ಜ. 2: ಪೀಪಲ್ಸ್ ಯುನಿಯನ್ ಫಾರ್ ಸಿವಿಲ್ ಲಿಬರ್ಟಿಸ್(ಪಿಯುಸಿಎಲ್) ಮುಂದಿನ ಎರಡು ವರ್ಷ ಅವಧಿಗೆ ಬೆಂಗಳೂರು ಶಾಖೆಯ ಅಧ್ಯಕ್ಷರಾಗಿ ಸುಜಾಯತ್ತುಲ್ಲಾ, ಉಪಾಧ್ಯಕ್ಷರಾಗಿ ಆರ್. ಮಂಗಳಾ, ಪ್ರಧಾನ ಕಾರ್ಯದರ್ಶಿಯಾಗಿ ತೇಜಸ್‍ಕುಮಾರ್ ಹಾಗೂ ಖಚಾಂಚಿಯಾಗಿ ಎಂ. ಗೀತಾ ಅವರನ್ನು ಆಯ್ಕೆಯಾಗಿದ್ದಾರೆ.
ಡಿ.28ರಂದು ಬೆಂಗಳೂರು ನಗರದ ಆಶಿರ್ವಾದ್ ಇನ್ಸಿಟ್ಯೂಷನ್‍ನಲ್ಲಿ ಪಿಯುಸಿಎಲ್ ಬೆಂಗಳೂರು ಶಾಖೆ ಸಾಮಾನ್ಯ ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯ ಸಮಿತಿ ಸದಸ್ಯರಾಗಿ ಮರಿಯ ಡೆವಿಡ್, ಕೆ.ಬಿ.ಓಬಳೇಶ್ ಮತ್ತು ವೈ.ಜೆ.ರಾಜೇಂದ್ರ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿಸಲಾಗಿದೆ.
ಲೋಕನಾಯಕ ಜಯಪ್ರಕಾಶ್ ಅವರಿಂದ 1975ರಲ್ಲಿ ಸ್ಥಾಪನೆಗೊಂಡು, 45 ವರ್ಷಗಳಿಂದ ಮಾನವ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸುತ್ತಿರುವ ಪಿಯುಸಿಎಲ್ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, ಪ್ರಜಾಪ್ರಭುತ್ವದ ತತ್ವದ ಅನುಸಾರ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಪಿಯುಸಿಎಲ್ ಮುಂಚೂಣಿಯಲ್ಲಿದೆ ಎಂದು ಜಿಲ್ಲಾಧ್ಯಕ್ಷ ಸುಜಾಯತ್ತುಲ್ಲಾ ಮತ್ತು ಪ್ರಧಾನ ಕಾರ್ಯದರ್ಶಿ ತೇಜಸ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





