ಕೇರಳ, ಮಹಾರಾಷ್ಟ್ರ ಸಹಿತ ಐದು ರಾಜ್ಯಗಳಲ್ಲಿ ಶೇ.62ರಷ್ಟು ಸಕ್ರಿಯ ಕೊರೋನ ಪ್ರಕರಣಗಳು

ಹೊಸದಿಲ್ಲಿ, ಜ.2: ಭಾರತದಲ್ಲಿ ನೊವೆಲ್ ಕೊರೋನ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಪೈಕಿ ಶೇ.62ರಷ್ಟು ಕೇರಳ, ಮಹಾರಾಷ್ಟ್ರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಚತ್ತೀಸ್‌ಗಢ ರಾಜ್ಯಗಳಲ್ಲಿ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ತಿಳಿಸಿದೆ.
ಭಾರತದಲ್ಲಿ ಪ್ರಸಕ್ತ ಕೊರೋನ ವೈರಸ್ ಸೋಂಕಿನ ಒಟ್ಟು 2,50,183 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ ಒಟ್ಟು 65,054 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ ಹಾಗೂ ಈ ಮಾರಣಾಂತಿಕ ಸೋಂಕಿನಿಂದಾಗಿ ಈವರೆಗೆ ಕೇರಳದಲ್ಲಿ 3 ಸಾವಿರ ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 20 ಲಕ್ಷ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಪ್ರಸಕ್ತ 52,084 ಸಕ್ರಿಯ ಪ್ರಕರಣಗಳಿವೆ.
ಭಾರತದ ಅತ್ಯಧಿಕ ಜನಸಂಖ್ಯೆಯ ರಾಜ್ಯವಾದ ಉತ್ತರಪ್ರದೇಶದಲ್ಲಿ 56,451ಕ್ಕೂ ಅಧಿಕ ಕೋವಿಡ್-19 ಪ್ರಕರಣಗಳಿವೆ. ಈವರೆಗೆ ರಾಜ್ಯದಲ್ಲಿ ಒಟ್ಟು 13,831 ಸಕ್ರಿಯ ಪ್ರಕರಣಗಳು ವರದಿಯಾಗಿವೆ.
ಪಶ್ಚಿಮ ಬಂಗಾಳದಲ್ಲಿ ಈವರೆಗೆ 5,31,862 ಪ್ರಕರಣಗಳು ದಾಖಲಾಗಿವೆ. ಒಟ್ಟು 11,616 ಸಕ್ರಿಯ ಪ್ರಕರಣಗಳಿವೆ. ಚತ್ತೀಸ್‌ಗಢದ 2,65,788 ಸಕ್ರಿಯ ಪ್ರಕರಣಗಳ ಪೈಕಿ 11,344 ಸಕ್ರಿಯವಾಗಿವೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಚತ್ತೀಸ್‌ಗಢದ ಪಾಲು 4.09 ಶೇಕಡಾ ಆಗಿದೆ.







