ಡಾ. ಇಸ್ಮಾಯಿಲ್ ರಿಗೆ ಬ್ಯಾರಿ ಅಕಾಡಮಿಯ ಗೌರವ ಪುರಸ್ಕಾರ ಪ್ರದಾನ

ಮಂಗಳೂರು, ಜ.2: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2020ನೇ ಸಾಲಿನ ಗೌರವ ಪುರಸ್ಕಾರವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಸ್ಮಾಯಿಲ್ ಹೆಜಮಾಡಿ ಅವರಿಗೆ ಶನಿವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಕೊರೋನ ವಾರಿಯಸ್ ಆಗಿ ಸೇವೆ ಸಲ್ಲಿಸಿದ್ದರಿಂದ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮಕ್ಕೆ ಬರಲು ಅನಾನುಕೂಲವಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಅಕಾಡಮಿಯ ಸದಸ್ಯ ಶಂಶೀರ್ ಬುಡೋಳಿ, ಡಾ.ನಜೀಬ್ ಬೆಝಾದ್, ರಮೇಶ್ ಭಟ್, ವಿಜಯ್, ಬಶೀರ್ ಉಪಸ್ಥಿತರಿದ್ದರು.
Next Story





