ಮಂಗಳೂರು, ಜ. 2: ಮಂಗಳೂರು ದಕ್ಕೆಯಲ್ಲಿ ತಮಿಳುನಾಡು ಮೂಲದ ಮೀನುಗಾರ ಅರ್ಮುಗಂ(22) ಎಂಬವರು ಶನಿವಾರ ಮೃತಪಟ್ಟಿದ್ದಾರೆ. ಬೋಟ್ ವೊಂದರಲ್ಲಿ ಕಾರ್ಮಿಕರಾಗಿದ್ದ ಇವರು ಸಂಜೆ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದರು ಎನ್ನಲಾಗಿದೆ. ಮೃತದೇಹವನ್ನು ರಾತ್ರಿ ವೇಳೆ ತಣ್ಣೀರುಬಾವಿ ಮುಳುಗು ತಜ್ಞರ ತಂಡದವರು ಕಾಯಾಚರಣೆ ನಡೆಸಿ ಮೇಲೆತ್ತಿದ್ದಾರೆ.