ಇಂಗ್ಲೆಂಡ್‌ನಲ್ಲಿ ತರಬೇತಿ ಫಲ ನೀಡಿದೆ: ಪಿ.ವಿ. ಸಿಂಧು

ಹೊಸದಿಲ್ಲಿ, ಜ.2: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ತಮ್ಮ ತರಬೇತಿಗಾಗಿ ಯುನೈಟೆಡ್ ಕಿಂಗ್‌ಡಮ್‌ಗೆ ತೆರಳಿರುವುದು ಕೋವಿಡ್ -19 ಪ್ರೇರಿತ ವಿರಾಮದ ಸಮಯದಲ್ಲಿ ತಾನು ಕೈಗೊಂಡ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
ಸಿಂಧು ಅಕ್ಟೋಬರ್‌ನಲ್ಲಿ ಯುಕೆಗೆ ತೆರಳಿದ್ದರು. ಅಂದಿನಿಂದಲೂ ಅಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಜನವರಿ 12ರಿಂದ 17ರವರೆಗೆ ಮತ್ತು ಜನವರಿ 19ರಿಂದ 24 ರವರೆಗೆ ನಡೆಯಲಿರುವ ಎರಡು ಥಾಯ್ಲೆಂಡ್ ಓಪನ್ ಪಂದ್ಯಾವಳಿಗಳಲ್ಲಿ ಅವರು ವೃತ್ತಿಪರ ಬ್ಯಾಡ್ಮಿಂಟನ್‌ಗೆ ಮರಳಲು ಸಜ್ಜಾಗಿದ್ದಾರೆ.
‘‘ಯುಕೆಗೆ ಪ್ರಯಾಣಿಸುವುದು ನನ್ನ ಅತ್ಯುತ್ತಮ ನಡೆಗಳಲ್ಲಿ ಒಂದಾಗಿದೆ, ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಸಾಂಕ್ರಾಮಿಕ ವಿರಾಮದಿಂದಾಗಿ. ಇಲ್ಲಿ ಹವಾಮಾನವು ತಣ್ಣಗಾಗಿದ್ದರೂ ಸಹ, ನಾನು ಹೆಚ್ಚಿನ ತೀವ್ರತೆಯ ತರಬೇತಿ ಅವಧಿಗಳನ್ನು ಆನಂದಿಸುತ್ತಿದ್ದೇನೆ’’ಎಂದು ಸಿಂಧು ಸ್ಪೋರ್ಟ್‌ಸ್ಟಾರ್‌ಗೆ ತಿಳಿಸಿದರು.
‘‘ನಾನು ಜನವರಿ (2021)ಯಿಂದ ಆಟವಾಡಲು ಪ್ರಾರಂ ಭಿಸುತ್ತೇನೆ. ಥಾಯ್ಲೆಂಡ್ ಮೊದಲ ಟೂರ್ನಿಯಾಗಿದೆ. ನಾವು ನಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಬೇಕು ಮತ್ತು ಸದೃಢವಾಗಿ ಕೆಲಸ ಮಾಡಬೇಕು, ಟೋಕಿಯೊದಲ್ಲಿ ಪದಕ ಗೆಲ್ಲುವ ಪ್ರಯತ್ನ ನಡೆಸುವುದಾಗಿ’’ ಎಂದು ಸಿಂಧು ಹೇಳಿದರು.
2020, ಮಾರ್ಚ್ 11 ಮತ್ತು 15ರ ನಡೆದ ಆಲ್ ಇಂಗ್ಲೆಂಡ್ ಓಪನ್ ಟೂರ್ನಿಯಲ್ಲಿ ಸಿಂಧು ಕೊನೆಯ ಬಾರಿ ಆಡಿದ್ದರು. ‘‘ಥಾಯ್ಲೆಂಡ್‌ಲ್ಲಿ ನನ್ನ ಮೊದಲ ಪಂದ್ಯಾ ವಳಿಗಾಗಿ ನಾನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ ಮತ್ತು ಉತ್ಸುಕನಾಗಿದ್ದೇನೆ. ಹೌದು, ಮಾನಸಿಕ ಅಂಶವು ಮುಖ್ಯವಾಗಿದೆ. ಇಷ್ಟು ದೀರ್ಘ ವಿರಾಮದ ನಂತರ ನಾವು ತುಂಬಾ ತಾಳ್ಮೆಯಿಂದಿರಬೇಕಾಗುತ್ತದೆ’’ ಎಂದು ಅವರು ಹೇಳಿದರು.
ಸಿಂಧು 2021ರ ಒಲಿಂಪಿಕ್ಸ್ ಗೆ ಅರ್ಹತೆಯನ್ನು ದೃಢಪಡಿಸಿದ್ದಾರೆ. ಅದು ಕಳೆದ ವರ್ಷದಿಂದ ಮುಂದೂಡಲ್ಪಟ್ಟಿತು. ಈ ವರ್ಷ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ. ಈ ವರ್ಷದ ಒಲಿಂಪಿಕ್ಸ್‌ಗೆ ಮೊದಲಿನ ಪಂದ್ಯಾವಳಿಗಳಲ್ಲಿ ಉತ್ತಮ ಫಲಿತಾಂಶಗಳೊಂದಿಗೆ ಮೊದಲ ಐದು ಸ್ಥಾನಗಳಿಗೆ ಮರಳಲು ಎದುರು ನೋಡುತ್ತಿದ್ದಾರೆ.
‘‘ಥಾಯ್ಲೆಂಡ್‌ನಲ್ಲಿ ಗೆಲುವಿನ ಆರಂಭದೊಂದಿಗೆ ಈ ವರ್ಷ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನನಗಿದೆ’’ ಎಂದು ಸಿಂಧು ಹೇಳಿದರು.







