ಕಾಸರಗೋಡು : ಮನೆ ಮೇಲೆ ಮಗುಚಿ ಬಿದ್ದ ವಿವಾಹ ದಿಬ್ಬಣ ಬಸ್; ಮಗು ಸೇರಿ ಆರು ಮಂದಿ ಮೃತ್ಯು
40ಕ್ಕೂ ಅಧಿಕ ಮಂದಿಗೆ ಗಾಯ
![ಕಾಸರಗೋಡು : ಮನೆ ಮೇಲೆ ಮಗುಚಿ ಬಿದ್ದ ವಿವಾಹ ದಿಬ್ಬಣ ಬಸ್; ಮಗು ಸೇರಿ ಆರು ಮಂದಿ ಮೃತ್ಯು ಕಾಸರಗೋಡು : ಮನೆ ಮೇಲೆ ಮಗುಚಿ ಬಿದ್ದ ವಿವಾಹ ದಿಬ್ಬಣ ಬಸ್; ಮಗು ಸೇರಿ ಆರು ಮಂದಿ ಮೃತ್ಯು](https://www.varthabharati.in/sites/default/files/images/articles/2021/01/3/273667-1609665549.jpeg)
ಕಾಸರಗೋಡು : ವಿವಾಹ ದಿಬ್ಬಣ ಬಸ್ಸೊಂದು ಮನೆಯೊಂದರ ಮೇಲೆ ಮಗುಚಿ ಬಿದ್ದ ಪರಿಣಾಮ ಮಗು ಸೇರಿದಂತೆ ಆರು ಮಂದಿ ಮೃತಪಟ್ಟ ಘಟನೆ ಕೇರಳ ಕರ್ನಾಟಕ ಗಡಿಯ ಪಾಣತ್ತೂರಿನಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.
40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಬಸ್ಸು ಮಗುಚಿ ಬಿದ್ದು, ಈ ದುರ್ಘಟನೆ ನಡೆದಿದೆ. ಅಪಘಾತಕ್ಕೀಡಾದ ಬಸ್ಸಿನಿಂದ ಎಲ್ಲಾ ಪ್ರಯಾಣಿಕರನ್ನು ಹೊರ ತೆಗೆದು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.