ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಗೆ ಅನುಮೋದನೆ: ಕಾಂಗ್ರೆಸ್ ಕಳವಳ

ಹೊಸದಿಲ್ಲಿ: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಯ ನಿರ್ಬಂಧಿತ ಬಳಕೆಗೆ ಭಾರತದ ಔಷಧ ನಿಯಂತ್ರಕ ಅನುಮತಿ ನೀಡಿರುವ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ರವಿವಾರ ಕಳವಳ ವ್ಯಕ್ತಪಡಿಸಿದರು. ಕಡ್ಡಾಯ ಪ್ರೋಟೊಕಾಲ್ ಗಳು ಹಾಗೂ ದತ್ತಾಂಶಗಳ ಪರಿಶೀಲನೆಯನ್ನು ಏಕೆ ವಿತರಿಸಲಾಗಿದೆ ಎಂದು ವಿವರಿಸುವಂತೆ ಸರಕಾರವನ್ನು ಕೇಳಿದ್ದಾರೆ.
ಕಡ್ಡಾಯ ಮೂರನೇ ಹಂತದ ಪ್ರಯೋಗಗಳು ಹಾಗೂ ದತ್ತಾಂಶ ಪರಿಶೀಲನೆಯನ್ನು ಯಾವುದೇ ದೇಶ ವಿತರಿಸದ ಕಾರಣ ಲಸಿಕೆ ಬಳಕೆಗೆ ಅನುಮತಿ ನೀಡುವ ವಿಷಯವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗಿದೆ ಎಂದು ಗೃಹ ವ್ಯವಹಾರಗಳ ಸಂಸದೀಯ ಸಮತಿಯ ಮುಖ್ಯಸ್ಥರಾಗಿರುವ ಶರ್ಮಾ ಹೇಳಿದರು.
ತಜ್ಞರ ಸಮಿತಿಯ ಮುಂದೆ ಸಲ್ಲಿಸಿದ ವರದಿ ಪ್ರಕಾರ ಮೂರನೇ ಹಂತದ ಪ್ರಯೋಗಗಳು ಪೂರ್ಣಗೊಂಡಿಲ್ಲ .ಸುರಕ್ಷತೆ,ಪರಿಣಾಮಕಾರಿತ್ವದ ಅಂಕಿಅಂಶವನ್ನು ಪರಿಶೀಲಿಸಲಾಗಿಲ್ಲ. ಇದು ಕಡ್ಡಾಯವಾಗಿ ಅವಶ್ಯಕತೆಯಾಗಿದೆ ಎಂದು ಅವರು ಹೇಳಿದರು.
Next Story





