ಚಳವಳಿಯಲ್ಲಿ ಪಾಲ್ಗೊಂಡ ಪ್ರತಿ ರೈತ ಕಾರ್ಮಿಕನೂ ‘ಸತ್ಯಾಗ್ರಹಿ’: ರಾಹುಲ್ ಗಾಂಧಿ

ಹೊಸದಿಲ್ಲಿ, ಜ. 3: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ನೂತನ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬ್ರಿಟಿಷ್ ಆಡಳಿತದ ಸಂದರ್ಭ ನಡೆದ ಚಂಪಾರಣ್ ಸತ್ಯಾಗ್ರಹಕ್ಕೆ ಹೋಲಿಸಿದ್ದಾರೆ.
ಪ್ರಸಕ್ತ ಚಳವಳಿಯಲ್ಲಿ ಪಾಲ್ಗೊಂಡಿರುವ ಪ್ರತಿಯೋರ್ವ ರೈತ ಕಾರ್ಮಿಕನು ಕೂಡ ಸತ್ಯಾಗ್ರಹಿ. ಅವರು ತಮ್ಮ ಹಕ್ಕನ್ನು ಹಿಂಪಡೆಯಲಿದ್ದಾರೆ ಎಂದು ಅವರು ಹೇಳಿದರು. ದೇಶ ಚಂಪಾರಣ್‌ನಂತಹ ದುರಂತವನ್ನೂ ಎದುರಿಸಲಿದೆ. ಆಗ ಬ್ರಿಟಿಷರು ‘ಕಂಪೆನಿ ಬಹದ್ದೂರ್’ ಆಗಿದ್ದರು. ಈಗ ಮೋದಿ ಗೆಳೆಯರು ‘ಕಂಪೆನಿ ಬಹದ್ದೂರ್’ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ 1917ರಲ್ಲಿ ಚಂಪಾರಣ್ ಸತ್ಯಾಗ್ರಹ ನಡೆಯಿತು. ಭಾರತದ ಸ್ವಾತಂತ್ರ ಚಳವಳಿಯಲ್ಲಿ ಈ ಸತ್ಯಾಗ್ರಹವನ್ನು ಚಾರಿತ್ರಿಕ ಘಟನೆಯಾಗಿ ಪರಿಗಣಿಸಲಾಗುತ್ತದೆ.
Next Story





