ಫ್ಲ್ಯಾಟ್ಗೆ ನುಗ್ಗಿ ಹೊಟೇಲ್ ನೌಕರರ 8 ಮೊಬೈಲ್ ಕಳವು
ಉಡುಪಿ, ಜ.3: ಹೊಟೇಲೊಂದರ ನೌಕರರು ವಾಸವಾಗಿರುವ ಫ್ಲ್ಯಾಟ್ ಗೆ ನುಗ್ಗಿ ಮೊಬೈಲ್ ಕಳವು ಮಾಡಿರುವ ಘಟನೆ ಬನ್ನಂಜೆ ಎಂಬಲ್ಲಿ ಡಿ.2ರಂದು ರಾತ್ರಿ ವೇಳೆ ನಡೆದಿದೆ.
ಉಡುಪಿಯ ಶಾಂತಿ ಸಾಗರ್ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದ ನೌಕರರು, ಬನ್ನಂಜೆಯ ಫ್ಲ್ಯಾಟ್ ನಲ್ಲಿ ಉಳಿದುಕೊಂಡಿದ್ದು, ಜ.2ರಂದು ರಾತ್ರಿ ಕೆಲಸ ಮುಗಿಸಿ ತಡವಾಗಿ ಬಂದ ಅಶ್ವಥ್ ಎಂಬವರು ಮನೆಯ ಬಾಗಿಲನ್ನು ಹಾಕದೆ ಮಲಗಿದ್ದರು ಎನ್ನಲಾಗಿದೆ.
ಈ ಸಮಯದಲ್ಲಿ ಮನೆಗೆ ನುಗ್ಗಿದ ಕಳ್ಳರು, 56,000 ರೂ. ಮೌಲ್ಯದ ಒಟ್ಟು 8 ಮೊಬೈಲ್ಗಳನ್ನು ಹಾಗೂ ಸತೀಶ್ ಪ್ರಭು ಎಂಬವರ ಪರ್ಸ್ನಲ್ಲಿದ್ದ 2000 ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story