ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟ ರಚನೆ

ಮಂಗಳೂರು, ಜ.3: ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟವು ರವಿವಾರ ನಗರದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ಕವಿ ಹುಸೈನ್ ಕಾಟಿಪಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ತಿತ್ವಕ್ಕೆ ಬಂದಿವೆ.
ಒಕ್ಕೂಟದ ನೂತನ ಗೌರವಾಧ್ಯಕ್ಷರಾಗಿ ಹುಸೈನ್ ಕಾಟಿಪಳ್ಳ, ಅಧ್ಯಕ್ಷರಾಗಿ ಶಮೀರ್ ಮುಲ್ಕಿ, ಉಪಾಧ್ಯಕ್ಷರಾಗಿ ಸಮದ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ರಾಝ್, ಜೊತೆ ಕಾರ್ಯದರ್ಶಿ ಯಾಗಿ ಇರ್ಫಾನ್ ಕಲ್ಕಟ್ಟ, ಸಿದ್ದೀಕ್ ಪಾಂಡವರಕಲ್ಲು, ಕೋಶಾಧಿಕಾರಿಯಾಗಿ ನಿಯಾಝ್ ಪುತ್ತೂರು, ಸೋಶಿಯಲ್ ಮೀಡಿಯಾ ಪ್ರಮೋಟರ್ ಆಗಿ ನಿಝಾಮ್ ನೆಕ್ಕಿಲ್ ಆಯ್ಕೆಗೊಂಡರು.
Next Story





