Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಯೋಧ್ಯೆ: ರಾಮನ ಬೃಹತ್ ವಿಗ್ರಹ...

ಅಯೋಧ್ಯೆ: ರಾಮನ ಬೃಹತ್ ವಿಗ್ರಹ ಸ್ಥಾಪನೆಗೆ ಮುಂದಾದ ಉತ್ತರಪ್ರದೇಶ ಸರಕಾರ

ಭೂಸ್ವಾಧೀನಕ್ಕೆ ದಲಿತರು, ಒಬಿಸಿ ವರ್ಗದ ನಿವಾಸಿಗಳ ವಿರೋಧ

ವಾರ್ತಾಭಾರತಿವಾರ್ತಾಭಾರತಿ3 Jan 2021 10:52 PM IST
share
ಅಯೋಧ್ಯೆ: ರಾಮನ ಬೃಹತ್ ವಿಗ್ರಹ ಸ್ಥಾಪನೆಗೆ ಮುಂದಾದ ಉತ್ತರಪ್ರದೇಶ ಸರಕಾರ

ಲಕ್ನೊ, ಜ.3: ವಿವಾದಿತ ಬಾಬರಿ ಮಸೀದಿ- ರಾಮಜನ್ಮಭೂಮಿ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಬೇಕೆಂದು 2019ರ ನವೆಂಬರ್‌ನಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದಾಗ, ಉತ್ತರಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿನ ಮಾಝಾ ಬರ್‌ಹಟಾ ಗ್ರಾಮದ ನಿವಾಸಿಗಳು ಹಿರಿಹಿರಿ ಹಿಗ್ಗಿದ್ದರು. ಆದರೆ ಈ ಸಂತಸ ಕೆಲವೇ ದಿನಗಳಲ್ಲಿ ಯಾತನೆಯಾಗಿ ಪರಿಣಮಿಸಲಿದೆ ಎಂದು ಅವರು ಕನಸಿನಲ್ಲೂ ಊಹಿಸಿರಲಿಲ್ಲ.

2020ರ ಜನವರಿ ಅಂತ್ಯದಲ್ಲಿ ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಝಾ ಹೊರಡಿಸಿದ ಅಧಿಸೂಚನೆಯಲ್ಲಿ ಮಾಝಾ ಬರ್‌ಹಟಾ ಗ್ರಾಮದ 85.977 ಹೆಕ್ಟೇರ್ ಭೂಮಿಯನ್ನು ರಾಮನ ಬೃಹತ್ ವಿಗ್ರಹ ಸ್ಥಾಪನೆಯ ಉದ್ದೇಶದಿಂದ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಸೂಚಿಸಲಾಗಿತ್ತು. ಆದರೆ ಆಗಸ್ಟ್‌ನಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಕೆಲವು ಅಧಿಕಾರಿಗಳ ಹೇಳಿಕೆಯ ಪ್ರಕಾರ, 85.977 ಹೆಕ್ಟೇರ್‌ಗಿಂತಲೂ ಅಧಿಕ ಜಮೀನಿನ ಅಗತ್ಯ ಇರುವುದರಿಂದ ಹೆಚ್ಚುವರಿಯಾಗಿ ಗ್ರಾಮಪಂಚಾಯತ್‌ನ ನ್ಯೂರ್‌ಕ ಪೂರ್ವ, ನ್ಯೂರ್‌ಕ ಪೂರ್ವ ದಲಿತ ಬಸ್ತಿ, ಧರ್ಮು ಕ ಪೂರ್ವ ಮತ್ತು ಛೋಟಿ ಮುಝ್ನಿಯಾ ಪ್ರದೇಶಗಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶ ಸರಕಾರಕ್ಕಿದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆ ತೀರ್ಪು ಹೊರಬೀಳುವ ಸುಮಾರು 1 ವರ್ಷದ ಮೊದಲೇ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ರಾಮನ ಭವ್ಯ ಪ್ರತಿಮೆ ನಿರ್ಮಾಣದ ಯೋಜನೆಯನ್ನು ಘೋಷಿಸಿದ್ದರು. ಆರಂಭದಲ್ಲಿ ಅಯೋಧ್ಯೆಯ ಬಳಿಯ ಮತ್ತೊಂದು ಗ್ರಾಮ- ಮೀರ್‌ಪುರ ಮಾಝವನ್ನು ಆಯ್ಕೆಮಾಡಿಕೊಳ್ಳಲಾಗಿತ್ತು. ಆದರೆ ಆ ಗ್ರಾಮದವರ ತೀವ್ರ ವಿರೋಧದಿಂದ ಈ ಯೋಜನೆಯನ್ನು ಸ್ಥಳಾಂತರಿಸಲಾಯಿತು. ಇಲ್ಲಿ ಜಗತ್ತಿನಲ್ಲೇ ಅತೀ ಎತ್ತರದ, 251 ಮೀಟರ್ ಎತ್ತರದ ರಾಮನ ವಿಗ್ರಹ ಸ್ಥಾಪಿಸಲಾಗುವುದು. ಇಲ್ಲಿ ಡಿಜಿಟಲ್ ಮ್ಯೂಸಿಯಂ, ಸಂವಾದ ಕೇಂದ್ರ, ಲೈಬ್ರೆರಿ, ವಾಹನ ಪಾರ್ಕಿಂಗ್ ವ್ಯವಸ್ಥೆ, ಹೋಟೆಲ್, ಅಲಂಕಾರ ಉದ್ಯಾನ ಮುಂತಾದವುಗಳನ್ನು ನಿರ್ಮಿಸಲಾಗುವುದು ಎಂದವರು ಘೋಷಿಸಿದ್ದರು.

ಮಾಝಾ ಬರ್‌ಹಟಾ ಗ್ರಾಮದಲ್ಲಿ ಆಯ್ಕೆ ಮಾಡಿಕೊಳ್ಳಲಾದ ಜಮೀನು ರಾಷ್ಟ್ರೀಯ ಹೆದ್ದಾರಿ ಮತ್ತು ನೀರಾವರಿ ಇಲಾಖೆಗೆ ಸೇರಿದ ಸ್ಥಳದ ಮಧ್ಯದಲ್ಲಿದ್ದು ಪರಸ್ಪರ ಒಪ್ಪಿಗೆಯ ಮೇಲೆ ಈ ಜಮೀನನ್ನು ಖರೀದಿಸಬಹುದು ಎಂದು ಜನವರಿ 2020ರ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಯೋಜನೆಯಲ್ಲಿ ಪರಸ್ಪರ ಹೊಂದಾಣಿಕೆಯೇ ಇಲ್ಲ, ಕೇವಲ ಗೊಂದಲ ಮಾತ್ರವಿದೆ ಎಂದು ಮಾಝಾ ಬರ್‌ಹಟಾ ಗ್ರಾಮಸ್ಥರು ಹೇಳುತ್ತಾರೆ.

ಈ ಯೋಜನೆಯಿಂದ ಸುಮಾರು ಸಾವಿರ ಕುಟುಂಬದ ಮೇಲೆ (ಇದರಲ್ಲಿ ಬಹುತೇಕರು ಬಡವರು, ಹಿಂದುಳಿದ ಜಾತಿ ಹಾಗೂ ಕೃಷಿ ಕಾರ್ಮಿಕರು) ಪರಿಣಾಮ ಉಂಟಾಗಲಿದೆ ಎಂದು ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿರುವ ಸ್ಥಳೀಯ ನಿವಾಸಿ ಅರವಿಂದ್ ಕುಮಾರ್ ಯಾದವ್ ಹೇಳಿದ್ದಾರೆ.

ನಾವು ರಾಮನಂತೆ ಜಲಸಮಾಧಿಯಾಗಲೂ ಸಿದ್ಧ, ಆದರೆ ನಮ್ಮ ಜಮೀನನ್ನು ನೀಡುವುದಿಲ್ಲ ಎಂದವರು ಸ್ಪಷ್ಟ ಮಾತುಗಳಲ್ಲಿ ಉಚ್ಚರಿಸಿದ್ದಾರೆ. ಅರವಿಂದ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್, ‘ನ್ಯಾಯಸಮ್ಮತ ಪರಿಹಾರ ಮತ್ತು ಭೂಸ್ವಾಧೀನದಲ್ಲಿ ಪಾರದರ್ಶಕತೆ, ಪುನರ್ವಸತಿ ಕಾಯ್ದೆ 2013ರ ಪ್ರಕಾರ ಕಾರ್ಯನಿರ್ವಹಿಸುವಂತೆ ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿದೆ.

ಈ ಕಾಯ್ದೆಯ ಪ್ರಕಾರ, ಭೂಸ್ವಾಧೀನದ ಸಂದರ್ಭ ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸಬೇಕು, ಭೂಸ್ವಾಧೀನದಿಂದ ಜಮೀನಿನ ಮೂಲ ಮಾಲಕರ ಆದಾಯಕ್ಕೆ ತೊಂದರೆಯಾಗಬಾರದು. ಈ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸಿರುವ ಅರವಿಂದ್, ಮನೆ ಕಳೆದುಕೊಂಡವರಿಗೆ ಮನೆ, ಜಮೀನಿನ ಬದಲು ಜಮೀನು, ಸ್ವಂತ ಭೂಮಿ ಹೊಂದಿಲ್ಲದೆ ಇಲ್ಲಿ ವಾಸಿಸುತ್ತಿರುವವರಿಗೆ ಉದ್ಯೋಗ ನೀಡಿದರೆ ಭೂಸ್ವಾಧೀನ ಪ್ರಕ್ರಿಯೆಗೆ ಸಮ್ಮತಿಸಬಹುದು ಎಂದು ಹೇಳಿದ್ದಾರೆ. ಫೆಬ್ರವರಿ 14ರಂದು ಧರಣಿ ಮುಷ್ಕರ ನಡೆಸಿದ್ದಕ್ಕೆ ಅರವಿಂದ್ ಹಾಗೂ ಇತರ 14 ಸ್ಥಳೀಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರದೇಶದಲ್ಲಿ ಜಾರಿಯಲ್ಲಿದ್ದ ಸೆಕ್ಷನ್ 144 ಉಲ್ಲಂಘಿಸಿರುವುದಾಗಿ ಮೊದಲ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದರೆ, ಸೆಪ್ಟಂಬರ್‌ನಲ್ಲಿ ದಾಖಲಿಸಿರುವ ಎರಡನೇ ಎಫ್‌ಐಆರ್‌ನಲ್ಲಿ ಅರವಿಂದ್ ಹಾಗೂ ಸ್ಥಳೀಯ ವ್ಯಕ್ತಿ ಅವದೇಶ್ ಕುಮಾರ್ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಶಾಂತಿ ಉಲ್ಲಂಘನೆ ಪ್ರಯತ್ನ, ಸರಕಾರಿ ಉದ್ಯೋಗಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ ಜೊತೆಗೆ ಹಲ್ಲೆ ನಡೆಸಿದ್ದ ಪ್ರಕರಣ ದಾಖಲಿಸಲಾಗಿದೆ. ತನ್ನನ್ನು ಎನ್‌ಕೌಂಟರ್ ನಡೆಸಿ ಕೊಲ್ಲುವುದಾಗಿ ಪೊಲೀಸರು ಬೆದರಿಸಿದ್ದಾರೆ ಎಂದು ಅರವಿಂದ್ ಆರೋಪಿಸಿದ್ದಾರೆ. ಬಡಜನರನ್ನು ಸ್ಥಳಾಂತರಿಸಿ ಇಲ್ಲಿ ರಾಮನ ವಿಗ್ರಹ ಸ್ಥಾಪಿಸುವ ಅಗತ್ಯವಿದೆಯೇ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ. ಅಷ್ಟಕ್ಕೂ ರಾಮನ ವಿಗ್ರಹ ಸ್ಥಾಪಿಸಲೇ ಬೇಕು ಎಂದಾದರೆ ಸಂತರು ಮತ್ತು ಅವರ ಭಕ್ತರ, ಬೆಂಬಲಿಗರ ಹೆಸರಲ್ಲಿರುವ ಸಾವಿರಾರು ಎಕರೆ ಜಮೀನನ್ನು ವಶಕ್ಕೆ ಪಡೆಯಲಿ. ಮಠಗಳ ಬಳಿ ನಮಗಿಂತ ಹೆಚ್ಚು ಜಮೀನಿದೆ. ಅವರಿಂದ ಪಡೆಯಲಿ. ಅಯೋಧ್ಯೆಯಲ್ಲಿರುವ ಸಂತರ ಅಖಾಡದ ಬಳಿ ಸಾವಿರಾರು ಎಕರೆ ಜಮೀನು ಇದೆ. ಅದನ್ನು ಪಡೆಯಲಿ. ಆಗಲೂ ಕಡಿಮೆ ಬಿದ್ದರೆ ನಮ್ಮ ಜಮೀನು ನೀಡಲು ಸಿದ್ಧ. ನಮ್ಮ ಗ್ರಾಮದ ಬಳಿ ನದಿಯ ಒಡ್ಡಿನ (ಕಟ್ಟೆ) ಬಳಿ ಖಾಲಿ ಬಿದ್ದಿರುವ ಜಮೀನಿದೆ. ಅಲ್ಲಿ ರಾಮನ ವಿಗ್ರಹ ಸ್ಥಾಪಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಭೂದಾನ ಚಳವಳಿಯಲ್ಲಿ ದೊರೆತ ಜಮೀನು

1950ರ ಭೂದಾನ ಚಳವಳಿಯಲ್ಲಿ ತಮಗೆ ಈ ಜಮೀನು ದೊರಕಿದೆ. ಇಲ್ಲಿರುವ ಕೆಲವರಿಗೆ ಜಮೀನಿಗೆ ಸಂಬಂಧಿಸಿದ ಹಕ್ಕುಪತ್ರ ದೊರಕಿದೆ. ಇನ್ನು ಕೆಲವರು ಈಗಲೂ ಪ್ರಯತ್ನಿಸುತ್ತಿದ್ದಾರೆ. ಈಗ ಸೂಕ್ತ ಪರಿಹಾರ ನೀಡದೆ ತಮ್ಮನ್ನು ಇಲ್ಲಿಂದ ಸ್ಥಳಾಂತರಿಸಲು ಸರಕಾರ ನಿರ್ಧರಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X