ಪಾಕ್: 2 ಲಕ್ಷ ಅಫ್ಘಾನ್ ನಿರಾಶ್ರಿತರ ನಕಲಿ ಗುರುತು ಚೀಟಿ ರದ್ದು
ಇಸ್ಲಾಮಾಬಾದ್ (ಪಾಕಿಸ್ತಾನ), ಜ. 3: ಅಫ್ಘಾನಿಸ್ತಾನಿ ನಿರಾಶ್ರಿತರು ಅಕ್ರಮವಾಗಿ ಹೊಂದಿರುವ ಸುಮಾರು 2 ಲಕ್ಷ ಕಂಪ್ಯೂಟರೀಕೃತ ರಾಷ್ಟ್ರೀಯ ಗುರುತಿ ಚೀಟಿ (ಸಿಎನ್‌ಐಸಿ)ಗಳನ್ನು ಪಾಕಿಸ್ತಾನ ರದ್ದುಪಡಿಸಿದೆ.
ತನ್ನ ತವರು ನಗರ ರಾವಲ್ಪಿಂಡಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್, ‘‘ಪಾಕಿಸ್ತಾನದಲ್ಲಿ 15 ಲಕ್ಷ ಅಫ್ಘಾನ್ ನಿರಾಶ್ರಿತರು ಕಾನೂನುಬದ್ಧವಾಗಿ ಹಾಗೂ ಸುಮಾರು 8 ಲಕ್ಷ ಅಫ್ಘಾನೀಯರು ಅಕ್ರಮವಾಗಿ ವಾಸಿಸುತ್ತಿರುವ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ’’ ಎಂದು ಹೇಳಿದರು.
ವೀಸಾ ವಿತರಣೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಾವು ನಿಭಾಯಿಸುತ್ತಿದ್ದೇವೆ ಎಂದು ಅವರು ಹೇಳಿದರು.
Next Story





