Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮಗೆ ಆಗಾಗ್ಗೆ ಎದೆನೋವು ಕಾಡುತ್ತದೆಯೇ?...

ನಿಮಗೆ ಆಗಾಗ್ಗೆ ಎದೆನೋವು ಕಾಡುತ್ತದೆಯೇ? ಕಾರಣಗಳು ಮತ್ತು ಲಕ್ಷಣಗಳು ಇಲ್ಲಿವೆ

ವಾರ್ತಾಭಾರತಿವಾರ್ತಾಭಾರತಿ4 Jan 2021 12:06 AM IST
share
ನಿಮಗೆ ಆಗಾಗ್ಗೆ ಎದೆನೋವು ಕಾಡುತ್ತದೆಯೇ? ಕಾರಣಗಳು ಮತ್ತು ಲಕ್ಷಣಗಳು ಇಲ್ಲಿವೆ

ಕೆಲವೊಮ್ಮೆ ತುಂಬ ಸಮಯ ಇರುತ್ತದೆ. ಎದೆನೋವಿಗೆ ಹಲವಾರು ಕಾರಣಗಳಿವೆ. ಅದು ವ್ಯಕ್ತಿಯು ತುರ್ತಾಗಿ ಆಸ್ಪತ್ರೆಗೆ ಧಾವಿಸುವಂತೆ ಮಾಡುವ ಅತ್ಯಂತ ಸಾಮಾನ್ಯ ಕಾರಣಗಳಲ್ಲೊಂದಾಗಿದೆ. ಎದೆನೋವು ಕುತ್ತಿಗೆಯ ಕೆಳಗೆ ಮತ್ತು ಡಯಫ್ರಾಮ್ ಅಥವಾ ವಪೆಯ ಮೇಲಿನ ಜಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಎದೆನೋವುಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು ಅಥವಾ ಸ್ಥಿತಿ ತೀರ ಹದಗೆಟ್ಟಿದ್ದರೆ ಆಸ್ಪತ್ರೆ ಭೇಟಿ ಅಗತ್ಯವಾಗಬಹುದು. ಎದೆನೋವು ಎದೆ ಭಾರವಾದ, ಬಿಗಿತ,ಉರಿ ಮತ್ತು ಸೂಜಿಯಿಂದ ಚುಚ್ಚಿದಂತಹ ಅನುಭವದಂತಹ ಲಕ್ಷಣಗಳನ್ನು ಹೊಂದಿದೆ.

 ಎದೆನೋವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸೌಮ್ಯದಿಂದ ಹಿಡಿದು ಸೂಜಿಯಿಂದ ಚುಚ್ಚಿದಂತಹ,ಬಿಟ್ಟು ಬಿಟ್ಟು ಬರುವ ನಿಯಂತ್ರಿಸಲಾಗದ ನೋವಿನವರೆಗೆ,ಹೀಗೆ ಅದು ವಿವಿಧ ಸ್ವರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ಎದೆನೋವಿನ ಅವಧಿ ಮತ್ತು ತೀವ್ರತೆ ಪ್ರತಿ ವ್ಯಕ್ತಿಗೂ ವಿಶಿಷ್ಟವಾಗಿರುತ್ತದೆ.

ಎದೆನೋವಿನ ಲಕ್ಷಣಗಳು

ಎದೆನೋವು ಹೃದಯಾಘಾತದಂತಹ ಗಂಭೀರ ಹೃದಯ ಸಂಬಂಧಿತ ಸಮಸ್ಯೆಯನ್ನು ಅಥವಾ ಎದೆನೋವನ್ನುಂಟು ಮಾಡುವ ಇತರ ಯಾವುದೇ ಕಾರಣವನ್ನು ಸೂಚಿಸಬಹುದು. ನೋವಿನ ವಿಧ,ಅದಿರುವ ಜಾಗ,ನೋವಿನ ಅವಧಿ ಮತ್ತು ಆ ನಿರ್ದಿಷ್ಟ ನೋವಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ಆಧರಿಸಿ ಎದೆನೋವನ್ನು ನಿರ್ದಿಷ್ಟವಾಗಿ ಗುರುತಿಸಬಹುದು. ಇವು ಎದೆನೋವು ಗಂಭೀರವೇ ಅಥವಾ ಸಾಮಾನ್ಯ ಸ್ವರೂಪದ್ದೇ ಎನ್ನುವುದನ್ನು ಹೇಳಬಲ್ಲವು. ಎದೆಯ ಮಧ್ಯಭಾಗದಲ್ಲಿ ನೋವು, ಎದೆಯನ್ನು ಹಿಂಡಿದಂತೆ ಅಥವಾ ಭಾರವಾಗಿರುವಂತೆ ಅನ್ನಿಸುವುದು,ನೋವು ಭುಜಗಳು,ತೋಳುಗಳು,ದವಡೆ ಅಥವಾ ಬೆನ್ನಿಗೆ ವ್ಯಾಪಿಸುವುದು,ಅತಿಯಾಗಿ ಬೆವರುವಿಕೆ,ಶ್ರಮದ ಕೆಲಸ ಮಾಡಿದಾಗ ಕಾಣಿಸಿಕೊಳ್ಳುವ ಮತ್ತು ವಿಶ್ರಾಂತಿ ಪಡೆದಾಗ ಶಮನಗೊಳ್ಳುವ ಎದೆನೋವು ಇವೆಲ್ಲ ಗಂಭೀರ ಸ್ವರೂಪವನ್ನು ಸೂಚಿಸುತ್ತವೆ ಮತ್ತು ಇದನ್ನು ಖಂಡಿತ ಕಡೆಗಣಿಸಬಾರದು.

ಎದೆನೋವಿಗೆ ಕಾರಣಗಳು

ಎದೆನೋವಿನ ಹಿಂದೆ ಹಲವಾರು ಕಾರಣಗಳಿರಬಹುದು. ಹೃದಯದ ಅಪಧಮನಿಗಳಲ್ಲಿ ಅಡಚಣೆಗಳು ಹೃದಯದ ಸ್ನಾಯುಗಳಿಗೆ ರಕ್ತ ಮತ್ತು ಆಮ್ಲಜನಕದ ಪೂರೈಕೆಯನ್ನು ತಗ್ಗಿಸುತ್ತವೆ, ಇದು ಎದೆನೋವಿಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಚರ್ಮ,ಸ್ನಾಯು,ಮೂಳೆ ಅಥವಾ ಕೀಲುಗಳಿಂದ ಆರಂಭಗೊಳ್ಳುವ ಮಸ್ಕುಲೊಸ್ಕೆಲೆಟಲ್ ನೋವಿನಂತಹ ಇತರ ಕಾರಣಗಳೂ ಎದೆನೋವನ್ನುಂಟು ಮಾಡುತ್ತವೆ. ಅಲ್ಲದೆ ಜಠರದಲ್ಲಿ ಆಮ್ಲದ ಹಿಮ್ಮುಖ ಹರಿವು ಅಥವಾ ಆ್ಯಸಿಟಿಡಿ ಕೂಡ ಎದೆನೋವನ್ನುಂಟು ಮಾಡುವ ಸಾಮಾನ್ಯ ಕಾರಣವಾಗಿದೆ. ಇದು ಎದೆಯಲ್ಲಿ ನೋವು ಮತ್ತು ಉರಿಯನ್ನುಂಟು ಮಾಡುತ್ತದೆ. ಶ್ವಾಸಕೋಶಗಳನ್ನು ಆವರಿಸಿಕೊಂಡಿರುವ ಪೊರೆಯಲ್ಲಿ ಕಾಣಿಸಿಕೊಳ್ಳುವ ನೋವು ಎದೆಗೆ ವ್ಯಾಪಿಸುವುದೂ ಇನ್ನೊಂದು ಕಾರಣವಾಗಿದೆ.

ಎದೆನೋವನ್ನು ನಿಭಾಯಿಸಲು ಟಿಪ್ಸ್

 ಎದೆನೋವಿಗೆ ಚಿಕಿತ್ಸೆಯು ಅದಕ್ಕೆ ಕಾರಣವನ್ನೂ ಅವಲಂಬಿಸಿದೆ. ವೈದ್ಯರು ಮಾತ್ರ ಎದೆನೋವಿನ ವಿಧವನ್ನು ಗುರುತಿಸಿ ಅದಕ್ಕೆ ಮುಖ್ಯ ಕಾರಣವನ್ನು ಹೇಳಬಲ್ಲರು. ನೋವು ತೀವ್ರವಾಗಿದ್ದರೆ ಅಥವಾ ಹಲವಾರು ನಿಮಿಷಗಳ ಕಾಲ ಇದ್ದರೆ ವ್ಯಕ್ತಿಯನ್ನು ತುರ್ತಾಗಿ ಆಸ್ಪತೆಗೆ ಕರೆದೊಯ್ಯಬೇಕಾಗುತ್ತದೆ.

  ಮಸ್ಕುಲೊಸ್ಕೆಲೆಟಲ್ ಕಾರಣದಿಂದ ಎದೆನೋವು ಉಂಟಾಗಿದ್ದರೆ ಸಾದಾ ನೋವು ನಿವಾರಕ ಮಾತ್ರೆಯನ್ನು ಸೇವಿಸಿದರೆ ಸಾಕು ಅಥವಾ ನೋವನ್ನು ಶಮನಗೊಳಿಸುವ ಜೆಲ್ ಅನ್ನು ನೋವಿರುವ ಜಾಗದಲ್ಲಿ ಲೇಪಿಸಬಹುದು. ಆ್ಯಸಿಡಿಟಿಯಿಂದ ಎದೆನೋವು ಉಂಟಾಗಿದ್ದರೆ ಎಂಟಾಸಿಡ್ ಸೇವನೆಯಿಂದ ಶಮನಗೊಳ್ಳುತ್ತದೆ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಎದೆನೋವು ಉಂಟಾಗಿದ್ದರೆ ನೈಟ್ರೇಟ್‌ನಂತಹ ಔಷಧಿಯನ್ನು ಒಳಗೊಂಡಿರುವ ಮಾತ್ರೆಯನ್ನು ನಾಲಿಗೆಯ ಬುಡದಲ್ಲಿ ಇಟ್ಟುಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ.

ಈ ಸರಳ ಉಪಾಯಗಳಿಂದ ಎದೆನೋವು ಕಡಿಮೆಯಾಗದಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ. ಎದೆನೋವು ನಿರಂತರವಾಗಿದ್ದರೆ ಮತ್ತು ಬಿಟ್ಟು ಬಿಟ್ಟು ಕಾಡುತ್ತಿದ್ದರೆ ವೈದ್ಯರು ಸೂಚಿಸಿದ ಔಷಧಿಗಳ ಸೇವನೆಯು ನೆರವಾಗುತ್ತದೆ. ದೈಹಿಕ ಶ್ರಮ ಮತ್ತು ಒತ್ತಡಗಳನ್ನು ನಿವಾರಿಸಿಕೊಳ್ಳುವ ಮೂಲಕ ಎದೆನೋವು ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X