ಬಾವಿಗೆ ಬಿದ್ದು ಮಹಿಳೆ ಮೃತ್ಯು
ಬೈಂದೂರು, ಜ.4: ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ರವಿವಾರ ಸಂಜೆ ವೇಳೆ ಬಿಜೂರು ಗ್ರಾಮದ ಹರಳು ಮಕ್ಕಿಮನೆ ಎಂಬಲ್ಲಿ ನಡೆದಿದೆ.
ಮೃತರನ್ನು ಪಾರ್ವತಿ(45) ಎಂದು ಗುರುತಿಸಲಾಗಿದೆ. ಇವರು ಮನೆಯ ಸಮೀಪದ ತೆಂಗಿನ ಹಾಗೂ ಅಡಿಕೆ ಮರಗಳಿಗೆ ನೀರು ಬಿಡಲು ತೋಟ ದಲ್ಲಿರುವ ಪಂಪ್ ಸೆಟ್ ಅನ್ನು ಚಾಲು ಮಾಡಿ ಬರುವಾಗ ಪಕ್ಕದಲ್ಲಿಯೇ ಇದ್ದ ಆವರಣ ವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story