ಗೃಹ ಉತ್ಪನ್ನಗಳ ತರಬೇತಿಗೆ ಅರ್ಜಿ ಆಹ್ವಾನ
ಮಣಿಪಾಲ, ಜ.4: ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್‌ನ ವತಿಯಿಂದ ಜ.11ರಿಂದ 16ರವರೆಗೆ ಗೃಹ ಉತ್ಪನ್ನಗಳಾದ ಸಾರು, ಸಾಂಬಾರು ಕಷಾಯ ಹುಡಿ, ಜ್ಯಾಮ್, ಹಪ್ಪಳ, ಸೆಂಡಿಗೆ, ಉಪ್ಪಿನಕಾಯಿ, ಫಿನಾಯಿಲ್ ತಯಾರಿಕೆ ಕುರಿತು 6 ದಿನಗಳ ಉಚಿತ ತರಬೇತಿಯ ನ್ನು ಬಿವಿಟಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ತರಬೇತಿ ಸಮಯದಲ್ಲಿ ಉಚಿತ ಊಟದ ವ್ಯವಸ್ಥೆ ಇದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ವಯಸ್ಸು, ದೂರವಾಣಿ ಸಂಖ್ಯೆ ಮತ್ತು ವಿದ್ಯಾರ್ಹತೆ ಯನ್ನು ಬಿಳಿಹಾಳೆಯಲ್ಲಿ ಬರೆದು ಭಾರತೀಯ ವಿಕಾಸ ಟ್ರಸ್ಟ್, ‘ಅನಂತ’, ಪೆರಂಪಳ್ಳಿ, ಅಂಬಾಗಿಲು ರಸ್ತೆ, ಕುಂಜಿಬೆಟ್ಟು ಅಂಚೆ ಉಡುಪಿ- 576102 ಈ ವಿಳಾಸಕ್ಕೆ ಕಳುಹಿಸಿಕೊಡಬಹುದು. ಅಥವಾ ದೂರವಾಣಿ ಸಂಖ್ಯೆ (0820) 2570263ನ್ನು ಸಂಪರ್ಕಿಸಿ ತಮ್ಮ ಭಾಗ ವಹಿಸುವಿಕೆಯನ್ನು ದೃಢೀಕರಿಸಬಹುದು ಎಂದು ಸಂಸ್ಥೆ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
Next Story





