"ಕೃಷಿ ಕಾಯ್ದೆ ವಾಪಸ್ ಪಡೆಯುವುದಿಲ್ಲ, ನೀವು ಸುಪ್ರೀಂ ಕೋರ್ಟ್ ಗೆ ಹೋಗಿ" ಎಂದು ಸಚಿವರು ಹೇಳಿದ್ದಾರೆ: ರೈತ ಸಂಘಟನೆ

ಹೊಸದಿಲ್ಲಿ: ರೈತರ ಪ್ರತಿನಿಧಿಗಳು ಹಾಗೂ ಕೇಂದ್ರ ಸರಕಾರದ ನಡುವೆ ಸೋಮವಾರ ಇಲ್ಲಿ ನಡೆದಿದ್ದ ಏಳನೆ ಸುತ್ತಿನ ಮಾತುಕತೆಯಲ್ಲಿ ಎರಡೂ ಕಡೆಯವರು ಒಮ್ಮತದ ನಿರ್ಧಾರಕ್ಕೆ ಬರಲು ವಿಫಲವಾಗಿದ್ದು, ಮುಂದಿನ ಸಭೆಯನ್ನು ಜ.8ಕ್ಕೆ ನಡೆಸಲು ಒಪ್ಪಿಕೊಂಡಿದ್ದಾರೆ. ತಮ್ಮ ಬೇಡಿಕೆ ಈಡೇರದಿದ್ದರೆ ಗಣರಾಜ್ಯೋತ್ಸವ ದಿನದಂದು ಬೃಹತ್ ರ್ಯಾಲಿ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸರ್ವನ್ ಸಿಂಗ್ ಪಂಧೇರ್, ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಿಲ್ಲ. ನೀವು ಸುಪ್ರೀಂಕೋರ್ಟ್ ನ್ನು ಸಂಪರ್ಕಿಸಬಹುದು ಎಂದು ಕೃಷಿ ಸಚಿವ ನರೇಂದ್ರ ತೋಮರ್ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಹೇಳಿದ್ದಾರೆ.
ದೀರ್ಘ ಹೋರಾಟಕ್ಕೆ ಸಜ್ಜಾಗಿ ಎಂದು ಪಂಜಾಬಿನ ಯುವಕರಿಗೆ ನಾವು ವಿನಂತಿಸುತ್ತೇವೆ. ಗಣರಾಜ್ಯೋತ್ಸವದ ದಿನದಂದು ಬೃಹತ್ ಮೆರವಣಿಗೆಯನ್ನು ಆಯೋಜಿಸಲಿದ್ದೇವೆ ಎಂದು ಪಂಧೇರ್ ಹೇಳಿದ್ದಾರೆ.
Next Story





