ಜ. 9ರಂದು ದೆಮ್ಮಲೆಯಲ್ಲಿ ಸಿರಾಜುದ್ದೀನ್ ಖಾಸಿಮಿ ಪ್ರಭಾಷಣ
ಮಂಗಳೂರು : ಬದ್ರಿಯಾ ಜುಮಾ ಮಸೀದಿ ದೆಮ್ಮಲೆ ಮಂಗಳೂರು ಇದರ ಆಶ್ರಯದಲ್ಲಿ ಶೈಖುನಾ ಮಿತ್ತಬೈಲ್ ಉಸ್ತಾದ್ ಅವರ ಎರಡನೇ ಅನುಸ್ಮರಣೆ ಕಾರ್ಯಕ್ರಮವು ಜ. 9ರಂದು ನಡೆಯಲಿದೆ.
ಮಧ್ಯಾಹ್ನ ಕೆ.ಪಿ. ಅಝ್‍ಅರ್ ಫೈಝಿ ಮಿತ್ತಬೈಲ್ ದುವಾ ನೆರವೇರಿಸಲಿದ್ದು, ಮುಹಮ್ಮದ್ ಇರ್ಶಾದ್ ದಾರಿಮಿ ತಹ್ಲೀಲ್ ಮತ್ತು ಖತಮುಲ್ ಕುರಾನ್‍ನ ನೇತೃತ್ವ ವಹಿಸಲಿದ್ದಾರೆ. ಸಂಜೆ 7.30ಕ್ಕೆ ಅಂತಾರಾಷ್ಟೀಯ ವಾಗ್ಮಿ ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





