Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಪ್ರಯಾಣ ಮಲಬದ್ಧತೆ ಮತ್ತು ಅದನ್ನು...

ಪ್ರಯಾಣ ಮಲಬದ್ಧತೆ ಮತ್ತು ಅದನ್ನು ತಡೆಯುವುದು ಹೇಗೆ?

ವಾರ್ತಾಭಾರತಿವಾರ್ತಾಭಾರತಿ5 Jan 2021 6:21 PM IST
share
ಪ್ರಯಾಣ ಮಲಬದ್ಧತೆ ಮತ್ತು ಅದನ್ನು ತಡೆಯುವುದು ಹೇಗೆ?

ನೀವೆಂದಾದರೂ ಪ್ರವಾಸದಲ್ಲಿದ್ದಾಗ ಮಲವಿಸರ್ಜನೆಗೆ ತೊಂದರೆಯನ್ನು ಅನುಭವಿಸಿದ್ದೀರಾ ಅಥವಾ ನೀವು ಪ್ರವಾಸವನ್ನು ಆರಂಭಿಸಿದ ಬೆನ್ನಲ್ಲೇ ಅಸ್ವಸ್ಥಗೊಂಡಿರುವ ಭಾವನೆ ಉಂಟಾಗುತ್ತಿದಯೇ? ಇವೆಲ್ಲ ಪ್ರಯಾಣ ಮಲಬದ್ಧತೆಯ ಲಕ್ಷಣಗಳಾಗಿವೆ. ಕೆಲವರಲ್ಲಿ ಲಕ್ಷಣಗಳು ಸೌಮ್ಯ ಸ್ವರೂಪದ್ದಾಗಿದ್ದರೆ ಇನ್ನು ಕೆಲವರಲ್ಲಿ ಪ್ರವಾಸ ಸಂದರ್ಭದಲ್ಲಿ ತೀವ್ರ ಮಲಬದ್ಧತೆಯುಂಟಾಗುತ್ತದೆ. ಪ್ರಯಾಣ ಮಲಬದ್ಧತೆಯು ಸಾಮಾನ್ಯ ಸಮಸ್ಯೆಯಾಗಿದ್ದು,ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಅದನ್ನು ನಿವಾರಿಸಬಹುದು.

  ಮಲಬದ್ಧತೆಗೆ ಹಲವಾರು ವ್ಯಾಖ್ಯೆಗಳಿವೆ. ಸಾಮಾನ್ಯವಾಗಿ ವಾರದಲ್ಲಿ 3-4 ದಿನಗಳವರೆಗೂ ಮಲವಿಸರ್ಜನೆಯಾಗದಿದ್ದರೆ ಅದನ್ನು ಮಲಬದ್ಧತೆ ಎಂದು ಪರಿಗಣಿಸಲಾಗುತ್ತದೆ. ಮಲ ಗಟ್ಟಿಗೊಂಡು ಅಲ್ಪ ಪ್ರಮಾಣದಲ್ಲಿ ವಿಸರ್ಜನೆಯಾಗುತ್ತಿದ್ದರೆ ಮತ್ತು ಕಷ್ಟವಾಗುತ್ತಿದ್ದರೆ ಅದೂ ಮಲಬದ್ಧತೆಯ ವ್ಯಾಖ್ಯೆಯಲ್ಲಿ ಬರುತ್ತದೆ.

ಪ್ರವಾಸದ ಸಂದರ್ಭಗಳಲ್ಲಿ ಮಾತ್ರ ಮಲಬದ್ಧತೆ ನಿಮ್ಮನ್ನು ಕಾಡುತ್ತಿದ್ದರೆ ಅದಕ್ಕೆ ಸಂಭಾವ್ಯ ಕಾರಣಗಳನ್ನು ನೀವು ತಿಳಿದುಕೊಳ್ಳಬೇಕು. ನಿಮ್ಮ ಬೆಳಗಿನ ದಿನಚರಿಯಲ್ಲಿ ದಿಢೀರ್ ಬದಲಾವಣೆ,ಜೈವಿಕ ಗಡಿಯಾರದಲ್ಲಿ ಬದಲಾವಣೆಗಳು,ಊಟದಲ್ಲಿ ಬದಲಾವಣೆ,ಪ್ರವಾಸದ ಸಂದರ್ಭದಲ್ಲಿ ನೀರು ಕುಡಿಯದಿರುವುದು, ತುಂಬ ಹೊತ್ತು ಕುಳಿತಿರುವುದು,ಜೆಟ್ ಲ್ಯಾಗ್,ಜೀರ್ಣಾಂಗದ ಮೇಲೆ ಒತ್ತಡ ಮತ್ತು ಬಳಲಿಕೆಯ ಪರಿಣಾಮ,ಪ್ರಯಾಣದ ವೇಳೆಯಲ್ಲಿ ಶೌಚಾಲಯ ಲಭ್ಯವಾಗದೆ ಮಲವಿಸರ್ಜನೆ ಮಾಡಲು ಸಾಧ್ಯವಾಗದಿರುವುದು ಇವೆಲ್ಲ ಪ್ರಯಾಣ ಮಲಬದ್ಧತೆಗೆ ಸಂಭಾವ್ಯ ಕಾರಣಗಳಾಗಿವೆ.

ಪ್ರಯಾಣ ಮಲಬದ್ಧತೆಯ ಚಿಕಿತ್ಸೆಗೆ ಔಷಧಿಗಳನ್ನು ಸೇವಿಸುವ ಮೊದಲು ಈ ನೈಸರ್ಗಿಕ ಉಪಾಯಗಳನ್ನು ಬಳಸಿ ನೋಡಿ. ಆಗಲೂ ಸಮಸ್ಯೆ ಬಗೆಹರಿಯದಿದ್ದರೆ ಔಷಧಿಗಳ ಮೊರೆ ಹೋಗಬಹುದು.

* ಯಥೇಚ್ಛ ನೀರಿನ ಸೇವನೆ

ಶರೀರದಲ್ಲಿ ನಿರ್ಜಲೀಕರಣವು ಮಲಬದ್ಧತೆಯನ್ನುಂಟು ಮಾಡುವ ಪ್ರಮುಖ ಕಾರಣಗಳಲ್ಲೊಂದಾಗಿದೆ. ನೀವು ಸಾಕಷ್ಟು ನೀರನ್ನು ಸೇವಿಸದಿದ್ದಾಗ ಶರೀರವು ಮಲವೂ ಸೇರಿದಂತೆ ಸಾಧ್ಯವಿರುವ ಎಲ್ಲ ಮೂಲಗಳಿಂದ ತೇವಾಂಶವನ್ನು ಹೀರಿಕೊಳ್ಳಲು ಪ್ರಯತ್ನಿಸುತ್ತದೆ. ಇದರಿಂದಾಗಿ ಮಲವು ಒಣಗುತ್ತದೆ ಮತ್ತು ಅದನ್ನು ಶರೀರದಿಂದ ಹೊರಹಾಕುವುದು ಕಠಿಣವಾಗುತ್ತದೆ. ಇದೇ ಕಾರಣದಿಂದ ಪ್ರವಾಸದಲ್ಲಿದ್ದಾಗ ಆಗಾಗ್ಗೆ ನೀರನ್ನು ಸೇವಿಸುವುದನ್ನು ಮರೆಯಬಾರದು. ನೀರಿನ ಜೊತೆಗೆ ಸೂಪ್‌ಗಳು ಮತ್ತು ಹಣ್ಣಿನ ರಸಗಳನ್ನೂ ಸೇವಿಸಬಹುದು. ಹಾಲನ್ನು ಸೇವಿಸುವ ಸಾಹಸ ಬೇಡ,ಅದು ಮಲಬದ್ಧತೆಯನ್ನುಂಟು ಮಾಡುತ್ತದೆ.

* ವೇಳಾಪಟ್ಟಿಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ

ನಮ್ಮ ಶರೀರದಲ್ಲಿಯ ಜೈವಿಕ ಗಡಿಯಾರವು ಕರುಳಿನ ಚಲನವಲನಗಳ ಮೇಲೆ ಪ್ರಭಾವವನ್ನು ಬೀರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಬಾತ್‌ರೂಮಿಗೆ ಹೋಗುವುದು ನಿಮ್ಮ ರೂಢಿಯಾಗಿದ್ದರೆ ಅದನ್ನು ಪ್ರವಾಸದ ಸಂದರ್ಭದಲ್ಲಿಯೂ ಕಾಯ್ದುಕೊಳ್ಳಿ. ನಿಮ್ಮ ನಿದ್ರೆ, ಹಸಿವು ಮತ್ತು ಕರುಳಿನ ಚಲನವಲನಗಳು ಕೆಲವೊಮ್ಮೆ ಮೇಳೈಸಿ ಕಾರ್ಯ ನಿರ್ವಹಿಸುತ್ತವೆ. ನೀವು ಪ್ರಯಾಣ ಮಲಬದ್ಧತೆಯ ಇತಿಹಾಸವನ್ನು ಹೊಂದಿದ್ದರೆ ಮಲಬದ್ಧತೆ ಮತ್ತು ಅತಿಸಾರವನ್ನು ತಡೆಯಲು ಪ್ರಯಾಣದ ನಡುವೆಯೂ ನಿಸರ್ಗದ ಕರೆಗಳಿಗೆ ಉತ್ತರಿಸುವುದನ್ನು ಮರೆಯಬೇಡಿ.

* ಸಮಯಕ್ಕೆ ಸರಿಯಾಗಿ ಊಟ ಮಾಡಿ

ಪ್ರವಾಸದ ಸಂದರ್ಭದಲ್ಲಿ ಹೆಚ್ಚಿನವರು ಮೋಜು-ಮಸ್ತಿಗಳ ಸಂಭ್ರಮದಲ್ಲಿ ಊಟ ಮಾಡುವುದನ್ನು ತಪ್ಪಿಸುತ್ತಾರೆ. ಅಲ್ಲದೆ ಕೆಲವೊಮ್ಮೆ ಪ್ರಯಾಣದಲ್ಲಿ ಏನು ಸಿಕ್ಕಿದರೂ ತಿನ್ನುತ್ತೇವೆ. ಸೂಕ್ತ ಆಹಾರವೂ ನಮಗೆ ದೊರೆಯುವುದಿಲ್ಲ. ಪ್ರಯಾಣದ ವೇಳೆ ಸೇವಿಸುವ ಜಂಕ್‌ಫುಡ್ ಜೀರ್ಣಾಂಗವನ್ನು ವ್ಯತ್ಯಯಗೊಳಿಸುತ್ತದೆ ಮತ್ತು ಕರುಳಿನ ಚಲನವಲನಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ.

* ಸರಿಯಾಗಿ ಬ್ರೇಕ್‌ಫಾಸ್ಟ್ ಮಾಡಿ

ಪ್ರಯಾಣದ ಸಂದರ್ಭದಲ್ಲಿ ಚೆನ್ನಾಗಿ ಬ್ರೇಕ್‌ಫಾಸ್ಟ್ ಮಾಡಿ, ಇದರಿಂದ ತುಂಬ ಹೊತ್ತು ಹೊಟ್ಟೆ ತುಂಬಿರುತ್ತದೆ ಮತ್ತು ಕರುಳಿನ ಚಲನವಲನಗಳಿಗೂ ಚಾಲನೆ ದೊರೆಯುತ್ತದೆ.

* ಏನಾದರೂ ಬೆಚ್ಚಗಿನ ಪಾನೀಯ ಸೇವಿಸಿ

ಬೆಳಿಗ್ಗೆ ಎದ್ದ ತಕ್ಷಣ ಬಿಸಿಯಾದ ನೀರು ಅಥವಾ ಸೂಪ್,ಕಾಫಿ ಮತ್ತು ಚಹಾದಂತಹ ಯಾವುದೇ ಬಿಸಿಯಾದ ಪಾನೀಯವನ್ನು ಸೇವಿಸಿದರೆ ಅದು ಮಲವಿಸರ್ಜನೆ ಪ್ರಕ್ರಿಯೆಗೆ ಪೀಠಿಕೆಯನ್ನು ಹಾಕುತ್ತದೆ. ನಿಮಗೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಚಹಾ ಅಥವಾ ಕಾಫಿ ಸೇವಿಸುವುದು ರೂಢಿಯಾಗಿದ್ದರೆ ಪ್ರವಾಸದ ಅವಧಿಯಲ್ಲಿಯೂ ಅದನ್ನು ಮುಂದುವರಿಸಿ. ಆದರೆ ದಿನವಿಡೀ ಸಾಕಷ್ಟು ನೀರು ಕುಡಿಯುವ ಕ್ರಮವನ್ನು ಕಾಯ್ದುಕೊಳ್ಳಿ.

* ಸಾಕಷ್ಟು ನಾರು ಸೇವಿಸಿ

ನಾರು ಮಲವಿಸರ್ಜನೆಯನ್ನು ಸುಲಭವಾಗಿಸುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರು ಯಥೇಚ್ಛ ನಾರನ್ನು ಸೇವಿಸಬೇಕು. ಹೀಗಾಗಿ ಪ್ರವಾಸದ ಸಂದರ್ಭದಲ್ಲಿ ನಾರನ್ನು ಸಮೃದ್ಧವಾಗಿ ಒಳಗೊಂಡಿರುವ ಆಹಾರಗಳನ್ನೇ ಸೇವಿಸಿ.

* ಕ್ರಿಯಾಶೀಲರಾಗಿರಿ

ನೀವು ರಜಾದಿನಗಳಲ್ಲಿ ಆರಾಮವಾಗಿರಲು ಪ್ರವಾಸವನ್ನು ಕೈಗೊಂಡಿದ್ದರೆ ನಿಮ್ಮ ದೈಹಿಕ ಕ್ರಿಯಾಶೀಲತೆಯೊಂದಿಗೆ ರಾಜಿ ಮಾಡಿಕೊಳ್ಳಬೇಡಿ. ಸುದೀರ್ಘ ಸಮಯ ಕುಳಿತಿರುವುದು ಮಲಬದ್ಧತೆಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಶರೀರದ ಚಲನೆ ಮಲಬದ್ಧತೆಯನ್ನು ತಡೆಯಲು ನೆರವಾಗಬಲ್ಲದು. ವಾಕಿಂಗ್ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಸಾಧ್ಯವಿದ್ದಾಗಲೆಲ್ಲ ದೈಹಿಕವಾಗಿ ಕ್ರಿಯಾಶೀಲರಾಗಿರಿ.

* ಆರಾಮವಾಗಿರಿ

 ಒತ್ತಡ ಯಾವುದಕ್ಕೂ ಪರಿಹಾರವಲ್ಲ. ಪ್ರವಾಸದ ಸಂದರ್ಭದಲ್ಲಿ ಅಸ್ವಸ್ಥಗೊಂಡರೆ ಹೆದರಿಕೊಳ್ಳಬೇಡಿ,ಚೇತರಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಅನುಸರಿಸಿ. ಕೆಲವರಲ್ಲಿ ಪ್ರಯಾಣ ಅಸ್ವಸ್ಥತೆ ಸಾಮಾನ್ಯವಾಗಿದೆ. ಕೆಟ್ಟ ಬೆಳವಣಿಗೆಗಳಿಗೆ ನೀವು ಮಾನಸಿಕವಾಗಿ ಸಿದ್ಧರಾಗಿದ್ದರೆ ಅವುಗಳನ್ನು ಎದುರಿಸುವ ಧೈರ್ಯವೂ ನಿಮ್ಮಲ್ಲಿರುತ್ತದೆ. ಯಾವುದೇ ಒತ್ತಡಕ್ಕೆ ಸಿಲುಕದೆ ಖುಷಿಖುಷಿಯಾಗಿದ್ದರೆ ನಿಮ್ಮ ಚಯಾಪಚಯ ಪ್ರಕ್ರಿಯೆಗೆ ಯಾವುದೇ ವ್ಯತ್ಯಯವಾಗುವುದಿಲ್ಲ. ಪ್ರವಾಸದ ಸಂದರ್ಭದಲ್ಲಿ ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಆರಾಮವಾಗಿದ್ದರೆ ಮಲಬದ್ಧತೆ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X