ಮಂಗಳೂರು ಐಸಿಎಐ ಅಧ್ಯಕ್ಷ ಎಸ್.ಎಸ್. ನಾಯಕ್‌ಗೆ ಸನ್ಮಾನ

ಮಂಗಳೂರು, ಜ.5: ನಗರದ ಸುಧೀಂದ್ರ ಸಭಾಭವನ ಇತ್ತೀಚೆಗೆ ನಡೆದ ‘ಕರ್ಣಾಟಕ ಬ್ಯಾಂಕ್ ಬಿಸಿನೆಸ್ ಟಾನಿಕ್’ ಶತಮಾನೋತ್ಸವ ಸಂಭ್ರಮದಲ್ಲಿ ಲೆಕ್ಕ ಪರಿಶೋಧಕ ಎಸ್.ಎಸ್. ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕಿನ ಎಂಡಿ ಹಾಗೂ ಸಿಇಒ ಎಂ.ಎಸ್. ಮಹಾಬಲೇಶ್ವರ, ಎನ್‌ಎಂಪಿಟಿ ಅಧ್ಯಕ್ಷ ಡಾ.ವೆಂಕಟರಮಣ ಅಕ್ಕರಾಜು, ಬೆಂಗಳೂರಿನ ಸಿಎ ಕೆ.ಗುರುರಾಜ ಆಚಾರ್ಯ, ಫಿಕ್ಕಿ ಕರ್ನಾಟಕದ ಚೇರ್ಮನ್ ಉಲ್ಲಾಸ್ ಕಾಮತ್, ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಎ. ಸೆಂಥಿಲ್ ವೇಲ್, ಕ್ರೆಡಾಯ್ ಮಂಗಳೂರು ಚೇರ್ಮನ್ ಡಿ.ಬಿ. ಮೆಹ್ತಾ, ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್, ದುಬೈನ ಹೂಡಿಕೆ ತಜ್ಞ ಡಾ.ಚಂದ್ರಕಾಂತ್ ಭಟ್, ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್‌ನ ಅಧ್ಯಕ್ಷ ಯು. ರಾಮರಾವ್, ಖ್ಯಾತ ಗಾಯಕ ಜಿ.ಮುರಳೀಧರ ಶೆಣೈ ಅತಿಥಿ ಗಳಾಗಿ ಭಾಗವಹಿಸಿದ್ದರು.
ಬಿಸಿನೆಸ್ ಟಾನಿಕ್‌ನ ನೂರನೇ ಸಂಚಿಕೆಯಲ್ಲಿ ಸಿಎ ಕೆ.ಗುರುರಾಜ ಆಚಾರ್ಯ ‘ಟೆನ್ ಕಮ್ಯಾಂಡ್ಮೆಂಟ್ಸ್ ಫಾರ್ ಬಿಸಿನೆಸ್’ ಪ್ರಬಂಧ ಮಂಡಿಸಿ ದರು. ಈ ಸಂದರ್ಭದಲ್ಲಿ ಕಳೆದ 50 ಸಂಚಿಕೆಗಳ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.
ನಮ್ಮ ಕುಡ್ಲದ ನಿರ್ದೇಶಕರಾದ ಹರೀಶ್ ಬಿ. ಕರ್ಕೇರ ಹಾಗೂ ಲೀಲಾಕ್ಷ ಬಿ. ಕರ್ಕೇರ ಮುಖ್ಯ ಅತಿಥಿಗಳನ್ನು ಸನ್ಮಾನಿಸಿದರು. ಕಾರ್ಯಕ್ರಮವನ್ನು ಸಿಎ ಯಶಶ್ವಿನಿ ಕೆ. ಅಮೀನ್ ಹಾಗೂ ನಿತಿನ್ ಬಿ. ಸಾಲಿಯಾನ್ ನಿರೂಪಿಸಿದರು.





